ಮುಂಬರುವ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಬದ್ದವೈರಿ ಪಾಕಿಸ್ತಾನ ವಿರುದ್ಧ ಆಡದಿದ್ದರೇ ಯಾವ ಅಂಕಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಸಿಹಿ ಸುದ್ದಿ ಸಿಕ್ಕಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ವಿಶೇಷ ಮಂಡಳಿ ಸಭೆ ನಡೆದಿತ್ತು. ಬಸಿಸಿಐ ಸದಸ್ಯರ ಹಾಜರಾತಿ ಒಪ್ಪಂದಕ್ಕೆ ಇನ್ನು ಸಹಿ ಹಾಕಬೇಕಿದೆ. ಈ ಒಪ್ಪಂದವನ್ನ ಬಿಸಿಸಿಐ ಪರವಾಗಿದ್ದು ಪಾಕಿಸ್ತಾನ ವಿರುದ್ಧ ಆಡಬೇಕೊ ಬೇಡವೋ ಅನ್ನೊದನ್ನ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇದೆ.
ವಿಶೇಷ ಸಭೆಯಲ್ಲಿ ಸದಸ್ಯ ಹಾಜರಾತಿ ಒಪ್ಪಂದವನ್ನ ಬಸಿಸಿಐ ಇಲ್ಲದೇ ಕಾರ್ಯರೂಪಕ್ಕೆ ತರುವಂತಿಲ್ಲ ಅನ್ನೋ ನಿಯಮದ ಕುರಿತು ಸಮಸ್ಯೆಯನ್ನ ಬಗೆಹರಿಸಿಕೊಂಡಿದೆ. ಸದಸ್ಯ ಹಾಜರಾತಿ ಒಪ್ಪಂದವನ್ನ ಬಿಸಿಸಿಐ ಪಡೆದಿದೆ ಎಂದು ಬಿಸಿಸಿಐ ಖಜಾಂಚಿ ಅನಿರುದ್ದ್ ಚೌಧರಿ ಹೇಳಿದ್ದಾರೆ.
ಇದೀಗ ಈ ಪ್ರಕರಣ ಐಸಿಸಿ ಮೇಲೆ ಒತ್ತಡ ಬೀಳಲಿದೆ. ಫೆಬ್ರವರಿ 22ರಂದು ನಡೆಯುವ ಸಭೆಯಲ್ಲಿ ಬಿಸಿಸಿಐ ಪಾಕಿಸ್ತಾನ ಜೊತೆ ಆಡಬೆಕೊ ಬೇಡವೋ ಅನ್ನೊ ಅಂತಿಮ ತೀರ್ಮಾನ ತೆಗೆದಕೊಳ್ಳಲಿದೆ.