ಜೆಡಿಎಸ್ ಸೇರ್ಪಡೆಯಾದ ಅರುಣಾಚಲ ಪ್ರದೇಶ ಮಾಜಿ ಸಿಎಂ

ದೀಬ್ರೂಗಡ: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಿಗಾಂಗ್​ ಅಪಾಂಗ್​ ಜೆಡಿಎಸ್​ ಗೆ ಸೇರ್ಪಡೆಯಾಗಿದ್ದಾರೆ.

ಅರುಣಾಚಲ ಪ್ರದೇಶದ ದೀಬ್ರೂಗಡದಲ್ಲಿ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಸಮ್ಮುಖದಲ್ಲಿ ಅಪಾಂಗ್​ ಜೆಡಿಎಸ್​ಗೆ ಸೇರ್ಪಡೆಯಾದರು. ಇವರು 23 ವರ್ಷ ಅರುಣಾಚಲ ಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

ಅಪಾಂಗ್​ ಜನವರಿ 1980 ರಿಂದ ಜನವರಿ 1999ರವರೆಗೆ ಮತ್ತು ಆಗಸ್ಟ್​ 2003 ರಿಂದ ಏಪ್ರಿಲ್​ 2007ರವರೆಗೆ ಮುಖ್ಯಮಂತ್ರಿಯಾಗಿದ್ದರು. 2014ರ ಲೋಕಸಭೆ ಚುನಾವಣೆಗೂ ಮುನ್ನ ಇವರು ಕಾಂಗ್ರೆಸ್​ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ವರ್ಷ ಜನವರಿ 15ರಂದು ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದ ಹೊರಬಂದಿದ್ದರು. ಈಗ ಜೆಡಿಎಸ್ ಸೇರಿದ್ದಾರೆ.

arunachal-pradesh former cm apang joined-jds

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ