ತುಮಕೂರು,ಫೆ.19- ರಾಷ್ಟ್ರಮಟ್ಟದಲ್ಲಿ ತುಮಕೂರು ಹೆಸರು ಪಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಜಾಗ, ಪಾರ್ಕ್ಗಳು, ರಾಜ ಕಾಲುವೆ, ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡಿವವರು ಯಾರೇ ಆಗಿರಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಹಾನಗರ ಮಾಲಿಕೆಯ ಅಯುಕ್ತರಿಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಖಡಕ್ ಆದೇಶ ನೀಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ಸಿಟಿ ಅನುಷ್ಠಾನದ ಯೋಜನೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರ ಜೂತೆ ಮಾತಾನಾಡಿದ ಅವರು, ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯ ಅನುದಾನ ದಲ್ಲಿ 1179 ಕೋಟಿಗಳ ವಿವಿಧ ಯೋಜನೆಗಳನ್ನು 5 ವರ್ಷದ ಅವಧಿಯಲ್ಲಿ ಅನುಷ್ಟಾನಗೂಳಿಸಲು ತೋರಿಸಲಾಗಿದೆ. ಪ್ರಸ್ತುತ 869.53 ಕೋಟಿಗಳ ಯೋಜನೆಗಳ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ತಾಂತ್ರಿಕ ವಾಗಿ ಅನುಮೋದನೆ ಪಡೆಯಲಾಗಿದೆ. ಅವುಗಳಲ್ಲಿ ಕೆಲವು ಕಾಮಗಾರಿಗಳ ಬಗ್ಗೆ ಟೆಂಡರ್ ಕರೆಯಲಾಗಿದೆ. ಇನ್ನು ಕೆಲವು ಯೋಜನೆಗಳು ಆಡಳಿತ್ಮಾಕವಾಗಿ ಅನುಮೋದನೆ ಹಂತದಲ್ಲಿವೆ ಎಂದು ಹೇಳಿದರು.
ಸ್ಮಾರ್ಟ್ಸಿಟಿ ಮೊದಲ ಹಂತದಲ್ಲಿ , ದಾವಣಗೆರೆ ಪ್ರಥಮ ಹಂತದಲ್ಲಿ ಇದೆ ಎರಡನೇ ಹಂತದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿಯತ್ತ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೈಕ್ಷಣಿಕ ವಾಗಿ ಅಭಿವೃದ್ಧಿ, ನಗರದ ವರ್ತುಲ ರಸ್ತೆಗಳ ಅಭಿವೃದ್ಧಿ, ಸೇರಿದಂತೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಮಾಡಲಾಗುವುದು. ತುಮಕೂರು ಅಮಾನಿಕೆರೆ ಅವರಣದಲ್ಲಿ ಒಂದು ಸ್ಮಾರ್ಟ್ ಲಾಂಚ್ ಸ್ಥಾಪಿಸಲಾಗಿದೆ.ಇದರಲ್ಲಿ ಡಿಜಿಟಲ್ ಲೈಬ್ರರಿ, ಎ ಟಿ ಎಂ, ಕಾಫಿ ಶಾಫ್, ಸೇರಿದಂತೆ ಹಲವು ಸೌಲಭ್ಯ ದೂರಕಲಿವೆ. ಅಪಘಾತ ಚಿಕಿತ್ಸೆ ಕೇಂದ್ರ ವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ 56 ಕೋಟಿಗಳ ಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ತುಮಕೂರು ನಗರದ ಜನರಿಗೆ 24*7 ಯೋಜನೆಯಡಿ ಹೇಮಾವತಿ ನೀರನ್ನು ಬಳಕೆ ಮಾಡಿ ಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತುಮಕೂರು ನಗರದ ಜನರಿಗೆ ಕುಡಿಯುವ ನೀರು ಹರಿಸಲು ಬುಗಡನಹಳ್ಳಿ ಕೆರಿಗೆ ಹೂಳು ಎತ್ತಲು ಹಾಗೂ ಕೆರೆಯನ್ನು ಅಬಿವೃದಿ ಪಡಿಸಲು ರಾಜ್ಯ ಸರ್ಕಾರ ಕಳೆದ ವರ್ಷ 60 ಕೋಟಿ ಹಣವನ್ನು ಮಂಜೂರು ಮಾಡಿತ್ತು. ಆದರೆ ಕೆರೆ ಅಭಿವೃದ್ಧಿಯೇ ಆಗಿಲ್ಲ. ಹಾಗದರೇ ಹಣ ಏನಾಯಿತು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳದಲ್ಲಿ ಇದ್ದ ಅದಿಕಾರಿಗಳಿಂದ ಮಾಹಿತಿ ಪಡೆದು ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುಲ್ವಾಮ ದಲ್ಲಿ ಯೋದರ ಮೇಲೆ ಉಗ್ರಗಾಮಿಗಳ ಬಾಂಬ್ ದಾಳಿ ತಿವ್ರವಾಗಿ ಖಂಡಿಸಿದ ಅವರು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಯೋದರ ಅತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಕಾರ್ಮಿಕ ಹೆಚ್ಚುವರಿ ಜಿಲ್ಲಾಧಿಕಾರಿಗಳ ಚನ್ನಬಸಪ್ಪ, ಮಹಾನಗರ ಪಾಲಿಕೆಯ ಆಯುಕ್ತರಾದ ಬೂ ಪಾಲನ್, ರಂಗಸ್ವಾಮಿ ಮಹಾನಗರ ಮಾಲಿಕೆಯ ಕಂದಾಯ ವಿಬಾಗದ ಮುಖ್ಯ ಅಧಿಕಾರಿ ಯೋಗಾನಂದ್ ಸೇರಿದಂತೆ ಇತರರು ಇದ್ದರು.