ಕುಂಭಮೇಳ ಗಂಗಾಪೂಜೆ ಮತ್ತು ದೀಪದ ಆರತಿ ಪೂಜೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ

ಮೈಸೂರು,ಫೆ.18.(ಕರ್ನಾಟಕ ವಾರ್ತೆ):- ತಿ.ನರಸೀಪುರ ತಿರುಮಕೂಡಲು ಶ್ರೀ ಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳ ಕಾರ್ಯಕ್ರಮದ ಎರಡನೇ ದಿನವಾದ ಸೋಮವಾರ ವಾರಣಾಸಿ ಮಾದರಿಯ ಗಂಗಾಪೂಜೆ ಹಾಗೂ ದೀಪಾರತಿ ಕಾರ್ಯಕ್ರಮ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಮ್ಮುಖದಲ್ಲಿ ನೆರವೇರಿತು.

ನಂತರ ಮಾತನಾಡಿದ ಅವರು ಈ ಕ್ಷೇತ್ರವು ಪುಣ್ಯಕ್ಷೇತ್ರ ವಾಗಿದ್ದು ದಕ್ಷಿಣ ಭಾರತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗುವಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಈ ಕ್ಷೇತ್ರಕ್ಕೆ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

   

ಪ್ರಕೃತಿ ನಮಗೆ ಸಹಕಾರ ನೀಡಿ ಉತ್ತಮ ಮಳೆ ಆದರೆ ಬೆಳೆ ಬೆಳೆದು ನಮ್ಮ ನಾಡಿನ ರೈತರು ನೆಮ್ಮದಿಯಿಂದ ಬದುಕಬೇಕು. ಹೆಚ್ಚು ಮಳೆಯಾದರೆ ಕಾವೇರಿ ನದಿಯ ನೀರು ಹಂಚಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಯಾವುದೇ ತೊಂದರೆ ಆಗುವುದಿಲ್ಲ ಹಾಗಾಗಿ ನಾನು ಕಾವೇರಿ ಮಾತೆಯನ್ನು ಕೇಳಿಕೊಳ್ಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ವಿಧಾನ ಸಭಾ ಸದಸ್ಯರುಗಳಾದ ಅನಿತಾ ಕುಮಾಸ್ವಾಮಿ, ಹೆಚ್.ವಿಶ್ವನಾಥ್, ಅಶ್ವಿನ್ ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು‌ ಹಾಗೂ ಇನ್ನಿತರ ಸ್ವಾಮಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

 

With Prashanth Yajman Raju Rachegowda Rakesh Mahadevaiah Badari Nath Vartha Bhavan Mysore Dept of Information & Public relations, Mysore Mysorevarthe Varthe

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ