ರೈನ್‍ಬೋ ಮಕ್ಕಳ ಆಸ್ಪತ್ರೆ ವತಿಯಿಂದ ಗರ್ಭಿಣಿಯರಿಗೆ ರ್ಯಾಂಪ್ ವಾಕ್

ಬೆಂಗಳೂರು, ಫೆ.17-ತಾಯ್ತನದ ಹೊಸ್ತಿಲಲ್ಲಿರುವ ನೂರಾರು ಮಹಿಳೆಯರಿಗೆ ಕಂಡು ಬಂದ ಚಿತ್ರಣ ತುಂಬಾ ವಿಭಿನ್ನ ಹಾಗೂ ವಿಶಿಷ್ಟವಾಗಿತ್ತು.

ಕೇವಲ ಸಾಂಪ್ರದಾಯಿಕ ಸೀಮಂತ ಅಷ್ಟೇ ಅಲ್ಲದೆ ಗರ್ಭಿಣಿಯರಿಗೆ ರ್ಯಾಂಪ್ ವಾಕ್ ಏರ್ಪಡಿಸಿ ಸಂಗೀತದ ಚಿಕಿತ್ಸೆ ಮತ್ತು ರುಚಿಕರ ಖಾದ್ಯಗಳನ್ನು ಸವಿಯುವ ಅವಕಾಶ ಒದಗಿಸಲಾಯಿತು. ಗರ್ಭಿಣಿಯರಿಗೆ ಮಗುವಿನ ಪೆÇೀಷಣೆ ಕುರಿತ ಸಲಹೆ ನೀಡಿ ಅಚ್ಚರಿಯ ಉಡುಗೊರೆಗಳನ್ನು ಕೊಟ್ಟು ಖುಷಿಪಡಿಸಲಾಯಿತು.
ಮಾರತ್‍ಹಳ್ಳಿಯಲ್ಲಿರುವ ರೈನ್ ಬೋ ಮಕ್ಕಳ ಆಸ್ಪತ್ರೆ ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಯಿತು.

ತಾಯ್ತನ ಎನ್ನುವುದು ಹೆಣ್ಣಿಗೆ ಭಗವಂತ ನೀಡಿದ ಅಪರೂಪದ ಕಾಣಿಕೆ. ಹೀಗಾಗಿ ರೈನ್‍ಬೋ ಆಸ್ಪತ್ರೆಯಲ್ಲಿನ ಬರ್ತ್‍ರೈಟ್ ಒಂದು ವಿಶಿಷ್ಟ ಬಗೆಯ ಯೋಚನೆಯನ್ನ್ನು ಕಾರ್ಯರೂಪಕ್ಕೆ ತರುವ ಮೂಲಕ ತಾಯ್ತನದ ಆನಂದ ಅನುಭವಿಸುತ್ತಿರುವರಿಗೆ ಸೀಮಂತ ಮಾಡುವುದರೊಂದಿಗೆ ಅವರ ಸಡಗರವನ್ನ ಇಮ್ಮಡಿಗೊಳಿಸಿದ್ದು, ಸಮಯೋಚಿತವಾಗಿತ್ತು.

ಈ ವೇಳೆ ಹೆರಿಗೆ ಸಮಯದಲ್ಲಿನ ಆತಂಕ ಹಾಗೂ ಸಂದೇಹಗಳನ್ನು ನುರಿತ ಗೈನಕಾಲಜಿಸ್ಟ್ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿಕೊಟ್ಟಿತು.

ಸ್ತನ್ಯಪಾನ ಕುರಿತ ಸಮಾಲೋಚನೆ ನಡೆಸಿ ತಾಯಿಂದಿರಿಗೆ ಮೇಕ್ ಓವರ್ ಮಾಡುವುದು, ಫನ್ ಗೇಮïಗಳು, ಹೆರಿಗೆ ಕುರಿತಾದ ಸಲಹೆಗಳು, ಅಪ್ಪ ಅಮ್ಮನಾಗುವ ಖುಷಿಯಲ್ಲಿರುವ ಜೋಡಿಗಳಿಗೆ ಫೆÇೀಟೋ ಸೆಷನ್ ಮತ್ತು ದಂಪತಿಗಳಿಗೆ ಗೇಮ್ ಆಡಿಸಿ ಬಹುಮಾನ ಕೂಡಾ ನೀಡಲಾಯಿತು.

ಮಾಜಿ ಮಿಸಸ್ ಏಶಿಯಾ ಇಂಟರ್‍ನ್ಯಾಷನಲ ಪ್ರತಿಭಾ ಸಂಶಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣಿಗೆ ಸೀಮಂತ ಒಂದು ಭಾವನಾತ್ಮಕ ಘಳಿಗೆ. ಸಾಂಪ್ರದಾಯಿಕವಾಗಿರುವಂತಹ ಒಂದು ಪದ್ಧತಿಯನ್ನು ಆಸ್ಪತ್ರೆಯಲ್ಲಿ ಆಯೋಜಿಸುವ ಮೂಲಕ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿರುವ ರೈನ್‍ಬೋ ಆಸ್ಪತ್ರೆಯು ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈನ್‍ಬೋ ಮಕ್ಕಳ ಆಸ್ಪತ್ರೆಯ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಹಾಗೂ ಕ್ಲಸ್ಟರï ಹೆಡï ನೀರಜï ಲಾಲï ಮಾತನಾಡಿ, ಗರ್ಭಿಣಿಯಾಗಿರುವವರು ಸದಾ ಸಂಭ್ರಮ ಸಂತೋಷ ಹಾಗೂ ನೆಮ್ಮದಿಯಿಂದಲೇ ಇರಬೇಕಾದಂತಹ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ