ಡಾ.ದೊಡ್ಡರಂಗೇಗೌಡರ ಸಾಹಿತ್ಯದಲ್ಲಿ ಅದ್ಭುತ ಶಕ್ತಿಯಿದೆ: ವೈ.ಕೆ.ಮುದ್ದುಕೃಷ್ಣ

ಬೆಂಗಳೂರು, ಫೆ.17 -ಡಾ.ದೊಡ್ಡರಂಗೇಗೌಡರ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಇದ್ದು ಕಾವ್ಯದ ವರ್ಣನೆಯನ್ನು ಮಾಡುವುದು ಅಷ್ಟು ಸುಲಭವಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸದ್ಭಾವನಾ ಪ್ರತಿಷ್ಠಾನ ಹಾಗು ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡರವರ 74ನೇ ಜನ್ಮದಿನದ ಸಂಭ್ರಮಾಚರಣೆ ಹಾಗೂ ಸಮನ್ವಯ ಕಾವ್ಯ ಮತ್ತು ಸಾಹಿತ್ಯ ಸಿಂಚನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡರಂಗೇಗೌಡರವರ ಕಾವ್ಯದ ಶಕ್ತಿಯ ವರ್ಣನೆ ಬೇಕಾಗಿಲ್ಲ. ಕಾವ್ಯದ ಆಶಯಗಳು ಕೂಡಾ ಓದುಗರಿಗೆ ಬದುಕನ್ನು ಕಟ್ಟಿಕೊಡುತ್ತವೆ. ಇಂತಹ ಕವಿಯ 75ನೆ ಜನ್ಮದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಮುಂದಿನ ವರ್ಷ ನಾನೇ ನೇತೃತ್ವ ವಹಿಸುತ್ತೇನೆ ಎಂದು ಹೇಳಿದರು.

ಕನ್ನಡದಲ್ಲಿ ಸಾಂಸ್ಕøತಿಕ ಸಂಪತ್ತು ಎಷ್ಟು ಶ್ರೀಮಂತವಾಗಿದೆಯೋ ಅಷ್ಟೇ ಕವಿಯ ಸಂಪತ್ತು ಕೂಡಾ ಇದೆ.ಒಂದು ವಸ್ತುವನ್ನು ನೆನೆಪಿಸಿಕೊಂಡು ಕ್ಷಣಮಾತ್ರದಲ್ಲಿ ಕಾವ್ಯ ರಚಿಸುವ ಸಾಮಥ್ರ್ಯ ದೊಡ್ಡರಂಗೇಗೌಡರಲ್ಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಲೋಕದಲ್ಲಲ್ಲದೆ ಸಿನಿಮಾ ಗೀತೆಗಳ ರಚನೆಯಲ್ಲೂ ಇವರು ಖ್ಯಾತಿ ಗಳಿಸಿದ್ದಾರೆ.ಅವರ ಸಾಧನೆ ಅಪಾರ ಎಂದು ಮುದ್ದುಕೃಷ್ಣ ಬಣ್ಣಿಸಿದರು.
ಮೈಸೂರು ವಿವಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಆರ್.ಶೇಷಶಾಸ್ತ್ರಿ ಮಾತನಾಡಿ, ನವೋದಯ ಕನ್ನಡ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಯುವ ಸಾಹಿತಿಗಳು ದೊಡ್ಡರಂಗೇಗೌಡರ ಸಾಹಿತ್ಯ ಸಿಂಚನ ಕೃತಿಯನ್ನು ಓದಬೇಕು.ಈ ಪುಸ್ತಕದಲ್ಲಿ ಕನ್ನಡದ ಹೆಸರಾಂತ ಕವಿಗಳನ್ನು ಪರಿಚಯಿಸಿದ್ದಾರೆ.ಡಿವಿಜಿಯವರನ್ನು ಕವಿಯಾಗಿ ಗುರುತಿಸಿ ದಾ.ರಾ.ಬೇಂದ್ರೆ ಕುವೆಂಪು ಸೇರಿದಂತೆ ಇತ್ತೀಚಿನ ತಲೆಮಾರಿನ ಸಾಹಿತಿಗಳ ಬಗೆಗೆ ಕೂಡಾ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ಆದ್ದರಿಂದ ದೊಡ್ಡರಂಗೇಗೌಡರ ಈ ಕೃತಿಗಳನ್ನು ಯುವ ಬರಹಗಾರರು ಓದುವಂತೆ ಕಿವಿಮಾತು ಹೇಳಿದರು.

ಹಿರಿಯ ಪತ್ರಕರ್ತ ಡಾ.ಭಾಷಾಗೂಳ್ಯಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾವ್ಯದ ತಳ-ಸುಳಿ ಗೊತ್ತಿಲ್ಲದವರೂ ಕೂಡಾ ಕಾವ್ಯದ ವಿಮರ್ಶೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ವಿಮರ್ಶಕರು ಮೊದಲು ಕಾವ್ಯದ ಮೂಲತತ್ವವನ್ನು ಅರಿಯಬೇಕು ಎಂದು ಹೇಳಿದರು.

ಡಾ.ದೊಡ್ಡರಂಗೇಗೌಡರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕವಿಗಳಾದ ಸುಬ್ಬುಹೊಲೆಯಾರ್, ತಾ.ಸಿ.ತಿಮ್ಮಯ್ಯ, ಕನ್ನಡ ಅಧ್ಯಾಪಕ ಡಿ.ಎಸ್.ಶ್ರೀನಿವಾಸಪ್ರಸಾದ್, ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶ್‍ಮೂರ್ತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪೆÇ್ರ.ಕೆ.ಭೆರವಮೂರ್ತಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ