ಬೆಂಗಳೂರು, ಫೆ.17- ಫೇಸ್‍ಬುಕ್‍ನಲ್ಲಿ ಭಾರತದ ಸೈನ್ಯದ ಮತ್ತು ಸೈನಿಕರ ಬಗ್ಗೆ ಹಾಗೂ ರಾಷ್ಟ್ರವಿರೋಧಿ ಅವಹೇಳನಕಾರಿ ಸಂದೇಶ ಪೆÇೀಸ್ಟ್ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂರ್ಯನಗರ ಪೆÇಲೀಸರು ಬಂಧಿಸಿದ್ದಾರೆ.
ಮೂಲತಃ ಜಮ್ಮು-ಕಾಶ್ಮೀರದವರಾದ ವಾಕರ್ ಅಹಮ್ಮದ್ ಅಲಿಯಾಸ್ ಹಾರೀಸ್(19), ಗೌಹಾರ್(21) ಹಾಗೂ ಜಾಕೀರ್ ಮಕ್ಬುಲ್ (23) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರೂ ಸೂರ್ಯನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಸ್ಫೂರ್ತಿ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ.
ಆರೋಪಿಗಳು ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದರು.ಈ ಬಗ್ಗೆ ದೂರು ದಾಖಲಾಗಿತ್ತು.ನಿನ್ನೆ ಸಂಜೆ ಆರೋಪಿಗಳನ್ನು ಬಂಧಿಸಿ ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇವರ ವಿರುದ್ಧ 124(ಎ), 153(ಬಿ), 323, 504 ಮತ್ತು 34 ಐಪಿಸಿ ಕಲಂ ಅಡಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣದಡಿ ಪ್ರಕರಣ ದಾಖಲಿಸಲಾಗಿದೆ.
ಈಗಾಗಲೇ ನಗರದ ಕಟ್ಟಿಗೇನಹಳ್ಳಿಯ ರೇವಾ ವಿವಿಯ ಇಂಜಿನಿಯರ್ ವಿದ್ಯಾರ್ಥಿಯಾಗಿರುವ ಕಾಶ್ಮೀರದ ಮೂಲದ ಬಾರಮುಲ್ಲಾ ಜಿಲ್ಲೆಯ ತಾಹೀರ್ ಲತೀಫ್ (23) ನನ್ನು ಬಾಗಲೂರು ಬಂಧಿಸಿದ್ದು, ಈತನೂ ಸಹ ವಾಟ್ಸಾಪ್‍ನಲ್ಲಿ ಉಗ್ರವಾದವನ್ನು ಬೆಂಬಲಿಸಿ ತನ್ನ ಸ್ಟೇಟಸ್‍ನಲ್ಲಿ ಸಂದೇಶಗಳನ್ನು ಹಾಕಿಕೊಂಡಿದ್ದ.