ಬೆಂಗಳೂರು, ಫೆ.16- ಕರ್ನಾಟಕ ರಾಜ್ಯ ಯುವಜನ ಆಯೋಗ ಆಂದೋಲನ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಯುವಜನರ ಹಕ್ಕುಗಳ ಮೇಳ-ಯುವಜನ ಆಯೋಗಕ್ಕಾಗಿ ಹಕ್ಕೊತ್ತಾಯ ಸಭೆಯನ್ನು ಫೆ.18ರಂದು ಬೆಳಗ್ಗೆ 11 ಗಂಟೆಗೆ ಪುಟ್ಟಣ್ಣ ಶೆಟ್ಟಿ ಪುರಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ದೇವರಾಜ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಕ್ರೀಡಾ ಇಲಾಖೆಯ ಸಚಿವ ರಹೀಂಖಾನ್, ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ಡಾ.ಜಿ.ಕಲ್ಪನಾ, ಮೇಯರ್ ಗಂಗಾಂಬಿಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಚಲನಚಿತ್ರ ನಟ ವಿಜಯ್ ರಾಘವೇಂದ್ರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಾಳೆ (ಫೆ.17) ಯುವ ಅಭಿವ್ಯಕ್ತಿ ಎಂಬ ಕಾರ್ಯಕ್ರಮ ಶಾಂತಿನಗರ ಸಂತ ಜೋಸೆಫರ ಕಾಲೇಜಿನ ಝೇವಿಯರ್ ಹಾಲ್ನಲ್ಲಿ ನಡೆಯಲಿದೆ.
18ರಂದು ನಡೆಯುವ ಸಭೆಯಲ್ಲಿ ಯುವ ಮುನ್ನಡೆಯಯುವ ಮುಂದಾಳುಗಳು ಯುವಜನ ಹಕ್ಕುಗಳ ಮಂಡನೆ ಮಾಡಲಿದ್ದು, ರಾಜ್ಯ ಸರಕಾರ ರಾಜ್ಯಯುವಜನ ಆಯೋಗ ಸ್ಥಾಪಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಯುವ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಭೆ ಏರ್ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.