ನವದೆಹಲಿ, ಫೆ.16-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ದೇಶದ ಪ್ರತಿಷ್ಠಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಉದ್ಘಾಟನೆಗೊಂಡ ಮರುದಿನವೇ ಈ ದೋಷ ಕಂಡುಬಂದಿದೆ. ವಾರಣಾಸಿಯಿಂದ ದೆಹಲಿಗೆ ಹಿಂತಿರುಗುವಾಗ ಇಂದು ಬೆಳಗ್ಗೆ ಈ ರೈಲಿನ ಸ್ಕಿಡ್ಡಿಂಗ್ ವ್ಹೀಲ್ಗಳಲ್ಲಿ ತಾಂತ್ರಿಕ ನ್ಯೂನ್ಯತೆ ಗೋಚರಿಸಿತು.
ಇಂದು ಬೆಳಗ್ಗೆ ವಾರಣಾಸಿಯಿಂದ ಈ ರೈಲು ದೆಹಲಿಗೆ ಆಗಮಿಸಿದ್ದು, ನಾಳೆ ಅಧಿಕೃತವಾಗಿ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಎಲ್ಲಾ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ.
ವಾರಣಾಸಿಯಿಂದ ಪರೀಕ್ಷಾರ್ಥವಾಗಿ ಚೊಚ್ಚಲ ಯಾನ ಆರಂಭಿಸಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ನ ಬ್ರೇಕ್ನಲ್ಲಿ ಕಾಣಿಸಿಕೊಂಡ ದೋಷವನ್ನು ಸರಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.