ಮೈಸೂರು, ಫೆ.15-ಕಾಶ್ಮೀರದ ಪುಲ್ವಾಮಾಜಿಲ್ಲೆಯಅವಂತಿಪುರದಲ್ಲಿ ನಿನ್ನೆ ನಡೆದಉಗ್ರರ ದಾಳಿ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನಗರದರೈಲ್ವೆ ನಿಲ್ದಾಣದಲ್ಲಿಇಂದು ಬೆಳಗಿನ ಜಾವದಿಂದಲೇ ರೈಲುಗಳಲ್ಲಿ ಬಂದಿಳಿದ ಪ್ರಯಾಣಿಕರನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಯಿತು.
ಪ್ರಯಾಣಿಕರು ತಂದಿದ್ದ ಲಗೇಜ್ ಹಾಗೂ ಅವರ ಬ್ಯಾಗ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹೊರಗೆ ಬಿಡಲಾಯಿತು. ಶ್ವಾನ ದಳಗಳಿಂದ ರೈಲುಗಳ ಪ್ರತಿ ಬೋಗಿ, ಪಾರ್ಸೆಲ್ಗಳು, ಇತರೆ ವಸ್ತುಗಳನ್ನು ಹಾಗೂ ಲಗೇಜ್ಗಳನ್ನು ತಪಾಸಣೆಗೊಳಪಡಿಸಿ ಆ ನಂತರ ರೈಲು ಹೊರಡಲು ಅನುಮತಿ ನೀಡಲಾಗುತ್ತಿದೆ.
ರೈಲ್ವೆ ನಿಲ್ದಾಣದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಮತ್ತು ಮಾಲೀಕರಿಲ್ಲದ ಬ್ಯಾಗ್ಗಳು ಕಾಣಿಸಿದರೆ ಅವುಗಳನ್ನು ಮುಟ್ಟದೆ ತಮ್ಮ ಗಮನಕ್ಕೆ ತರುವಂತೆರೈಲ್ವೆ ಪೊಲೀಸರು ಮನವಿ ಮಾಡಿದ್ದಾರೆ.
ಅದೇರೀತಿ ಪ್ರವಾಸಿಗರು ಹೆಚ್ಚು ಆಗಮಿಸುವ ಮೈಸೂರುಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಸೆಂಟ್ ಫಿಲೋಮಿನಾ ಚರ್ಚ್, ಜಗನ್ಮೋಹನ ಅರಮನೆ ಮತ್ತಿತರರೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ.