ಬೆಂಗಳೂರು, ಫೆ.15-ಸ್ವರ ಸನ್ನಿಧಿ ಟ್ರಸ್ಟ್ ವತಿಯಿಂದ ಅರಳುವ ಹೂಗಳ ಹೂಬನ ಎಂಬ ಸಮಾಜಮುಖಿ ಸಂಗೀತ ಕಾರ್ಯಕ್ರಮ, ಎಸ್ಸಿಕೆ ಅಭಿಯಾನವನ್ನು ನಾಳೆ (ಫೆ.16) ಹಮ್ಮಿಕೊಳ್ಳಲಾಗಿದೆ.
ನಗರದ ಕಿದ್ವಾಯಿ ಸಂಸ್ಥೆ, ಮಕ್ಕಳ ವಿಭಾಗದ ಆವರಣದಲ್ಲಿ ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ, ಗಾಯಕಿ ಡಾ.ಶಮಿತಾ ಮಲ್ನಾಡ್ ತಿಳಿಸಿದ್ದಾರೆ.
ಪ್ಯಾರಾಮೌಂಟ್ ನ್ಯೂಟ್ರಿಷಿಯನ್ಸ್ ಇಂಡಿಯಾದ ಅಧ್ಯಕ್ಷರಾದ ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ತಿಬ್ಬಾದೇವಿ ಟೆಂಟ್ ಹೌಸ್ ಮಾಲೀಕ ಕೃಷ್ಣೇಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಾಜ ಸೇವಕ ನೀಲಕಂಠ ಆರ್.ಗೌಡರು ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪರಿಸರ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ವೆಂಕಟಪ್ಪ ಪಾಲ್ಗೊಳ್ಳಲಿದ್ದಾರೆ.
ಗೌರವ ಅಭಿನಂದನೆಯನ್ನು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ನಿರ್ದೇಶಕರಾದ ಡಾ.ಸಿ.ರಾಮಚಂದ್ರ ಹಾಗೂ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ಅಪ್ಪಾಜಿಗೌಡರು ಸ್ವೀಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಬಿ.ಕೃಷ್ಣ, ಹೋಮಿಯೋಪತಿ ತಜ್ಞೆ, ಕಲಾವಿದೆ ಡಾ.ವಾಣಿ ಹಿರೇಮಠ ವಿಶೇಷ ಆಹ್ವಾನಿತರಾಗಿ ಅನಿರುದ್ಧ್ ಜಮದಗ್ನಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ದರ್ಶನ್ ತೂಗ್ದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕ್ಯಾನ್ಸರ್ ಪೀಡಿತ ಮಕ್ಕಳ ಮನರಂಜನೆಗಾಗಿ ಹಾಡೋಣ ಬಾ ಕಾರ್ಯಕ್ರಮ ಕೂಡ ನಡೆಯಲಿದೆ.
ನಟ ವಿನೋದ್ ಪ್ರಭಾಕರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.