ಲಾಲ್‍ಬಾಗ್ ಗೇಟ್‍ಗಳ ಮುಂದೆ ವಾಹನಗಳ ಮುಕ್ತ ಎಂದು ಫಲಕಗಳ ಅಳವಡಿಕೆಯಾಗಬೇಕು: ಒಕ್ಕೂಟದ ಅಧ್ತಕ್ಷ ಸಿ.ಕೆ.ರವಿಚಂದ್ರ

ಬೆಂಗಳೂರು, ಫೆ.15- ಕರ್ನಾಟಕ ನಡಿಗೆದಾರರ ಒಕ್ಕೂಟ ಲಾಲ್‍ಬಾಗ್‍ನ ಗೇಟ್‍ಗಳ ಮುಂದೆ ವಾಹನಗಳ ಮುಕ್ತ ಎಂದು ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿ.ಕೆ ರವಿಚಂದ್ರ, ಜ.24 ರಂದು ತೋಟಗಾರಿಕಾ ಮಂತ್ರಿಗಳು ಲಾಲ್‍ಬಾಗ್ ವಾಹನಗಳ ಮುಕ್ತ ಎಂದು ಪ್ರಕಟಿಸಿದ್ದು ಈ ನಿರ್ಧಾರದಂತೆ ಗೇಟ್‍ಗಳ ಮುಂದೆ ಫಲಕ ತೂಗು ಹಾಕುವಂತೆ ಮನವಿ ಮಾಡಿದರು.

ನಾಲ್ಕು ಗೇಟ್‍ಗಳಲ್ಲಿ ದ್ವಿಚಕ್ರ ವಾಹನಗಳು ಪ್ರವೇಶಿಸದಂತೆ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಸೆಯಾಗಿತ್ತು. ಇದಕ್ಕೆ ನಿವೃತ್ತ ನ್ಯಾ.ಡಿ.ವಿ.ಶೈಲೇಂದ್ರ ಕುಮಾರ್ ಸಹಮತ ವ್ಯಕ್ತಪಡಿಸಿದ್ದರು. ನಂತರ ತೋಟಗಾರಿಕಾ ಇಲಾಖೆ ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‍ಗಳನ್ನು ಹಾಕಿಸಿತ್ತು. ಇದೆಲ್ಲ ಒಳ್ಳೆಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಫಲಕಗಳ ಮೂಲಕ ಲಾಲ್‍ಬಾಗ್ ಆವರಣದಲ್ಲಿ ಅಲ್ಲಲ್ಲಿ ಬೋರ್ಡ್‍ಗಳನ್ನು ಅಳವಡಿಸಿ ಪ್ರವಾಸಿಗರು ಪ್ಲಾಸ್ಟಿಕ್ ಕವರ್ ಮತ್ತಿತರ ವಸ್ತುಗಳನ್ನು ಬಳಸಬಾರದೆಂದು ಜಾಗೃತಿ ಮೂಡಿಸಿದ್ದರಿಂದ ಈಗ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಬೇಕೆಂದು ಅವರು ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದರು.

ಕರ್ನಾಟಕ ನಡಿಗೆದಾರರ ಒಕ್ಕೂಟಕ್ಕೆ ಮತ್ತೆ ನಾನೇ ಅಧ್ಯಕ್ಷನಾಗಿ ಪುನರಾಯ್ಕೆ ಯಾಗಿರುವುದು ಸಂತಸ ತಂದಿದೆ ಎಂದು ರವಿಚಂದ್ರ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ