ದೆಹಲಿ,ಫ.15-ಬಾರತದಲ್ಲಿ ಪಾಕಿಸ್ತಾನದ ಹೈ ಕಮೀಷನರ್ ಅವರಿಗೆ ಕರೆ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಹೈ ಕಮೂಷನರ್ ಅವರಿಗೆ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಸಂಬಂಧ ಕಠಿಣ ಬೇಡಿಕೆಯನ್ನು ಹೊರಡಿಸಿದರು.
ಮೂಲಗಳ ಪ್ರಕಾರ ವಿಜಯ್ ಗೋಖಲೆ ಅವರು ದೆಹಲಿಯ ತಮ್ಮ ಕಚೇರಿಗೆ ಪಾಕ್ನ ಹೈ ಕಮೀಷನರ್ ಅವರನ್ನು ಕರೆಸಿಕೊಂಡರು. ಹಾಗೂ ಪಾಕಿಸ್ತಾನವು ತಕ್ಷಣವೇ ಉಗ್ರರ ಸಂಘಟನೆಯಾದ ಜೈಷ್-ಇ-ಮೊಹಮದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಅಥವಾ ಗುಂಪು ಭಯೋತ್ಪಾನೆಯನ್ನು ನೆರೆಯ ರಾಷ್ಟ್ರದ ಪ್ರಾಂತ್ಯದಿಂದ ಕಾರ್ಯಾಚರಣೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ನೆನ್ನೆ ದಾಳಿ ಸಂಬಂಧ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ನೀಡಿರುವ ಹೇಳಿಕೆಯನ್ನು ವಿದೇಶಾಂಗ ಕಾರ್ಯದರ್ಶಿಗಳು ತಿರಸ್ಕರಿಸಿದರು.
ಈ ಮದ್ಯೆ ಭಾರತದಿಂದ ಪಾಕಿಸ್ತಾನದಲ್ಲಿ ಹೈ ಕಮೀಷನರ್ ಆಗಿರುವ ಆಜಯ್ ಬಿಸಾರಿಯವರನ್ನು ದೆಹಲಿಗೆ ಬರುವಂತೆ ಕರೆ ನೀಡಿದೆ.
ಮೂಲಗಳ ಪ್ರಕಾರ ಬಿಸಾರಿಯವರೊಂದಿಗೆ ಸಮಾಲೋಚನೆ ನಡೆಸಲು ದೆಲಿಗೆ ಕರೆಯಲಾಗಿದೆ.