
ಬೆಂಗಳೂರು, ಫೆ.15- ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೇರಿಗೆ ಭೇಟಿ ನೀಡಿ ವೀರ ಮರಣ ಅಪ್ಪಿದ ಎಚ್.ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ದೇಶ ಸೇವೆಗೆ ಜೀವನ ಮುಡುಪಾಗಿಟ್ಟ ಗುರು ಅವರ ಆದರ್ಶ ಯುವಕರಿಗೆ ಮಾದರಿಯಾಗಿದೆ. ಇಡೀ ದೇಶ ಇವರನ್ನು ಸ್ಮರಿಸುತ್ತಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿಮತ್ತು ಕುಟುಂಬಕ್ಕೆ ದುಃಖದ ಸಂದರ್ಭದಲ್ಲಿ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.