ಅಜ್ಮೀರ್(ರಾಜಸ್ತಾನ), ಫೆ.14-ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಬಗ್ಗೆ ಮೋದಿ ಅವರು ಪೊಳ್ಳು ಭರವಸೆ ನೀಡಿದ್ಧಾರೆ. ಆದರೆ ಅವರು ತಮ್ಮ ಉದ್ಯಮಿ ಗೆಳೆಯರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ ಎಂದು ಆಪಾದಿಸಿದರು.
ರಾಜಸ್ತಾನದ ಅಜ್ಮೀರ್ನಲ್ಲಿ ಇಂದು ಅಖಿಲ ಭಾರತ ಸೇವಾ ದಳದ ಎರಡು ದಿನಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಆಡಳಿತದಲ್ಲಿ ಕೃಷಿಕರು, ಯುವಕರು ಮತ್ತು ಸಣ್ಣ ವ್ಯಾಪಾರಿಗಳು ಹೀಗೆ ಸಮಾಜದ ಪ್ರತಿಯೊಂದು ವರ್ಗವೂ ಸಂಕಷ್ಟ ಅನುಭವಿಸುತ್ತಿದೆ. ಇವೆರಲ್ಲರಿಗೂ ನ್ಯಾಯ ಲಭಿಸುವಂತಾಬೇಕೆಂದು ಹೇಳಿದರು.
ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಾಲವನ್ನು ಮನ್ನಾ ಮಾಡಿದೆ. ಕೃಷಿಕರ ಸಾಲ ಮನ್ನಾ ವಿಷಯದಲ್ಲಿ ಪ್ರಧಾನಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಅವರು ತಮ್ಮ ಆಪ್ತ ಉದ್ಯಮಿ ಮಿತ್ರರ ಬಾಂಕ್ ಸಾಲದ ಹಣವನ್ನು ಮನ್ನಾ ಮಾಡಿದ್ದಾರೆ ಎಂದು ಟೀಕಿಸಿದರು.