ಮೇಲ್ಮನೆಯಲ್ಲಿ ಪ್ರತಿಭಟನೆ, ಧರಣಿ ನಡುವೆಯೇ ಮಹತ್ವದ ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು, ಫೆ.14- ಹಾಸನದ ಶಾಸಕ ಪ್ರೀತಂಗೌಡಅವರ ಮನೆ ಮೇಲೆ ನಡೆದಿರುವ ದಾಳಿ ಖಂಡಿಸಿ ಮೇಲ್ಮನೆ ಸದಸ್ಯರು ಪ್ರತಿಭಟನೆ, ಧರಣಿ ಮುಂದುವರಿಸಿದ ನಡುವೆಯೇ ಹಲವು ಮಹತ್ವದ ವಿಧೇಯಕಗಳಿಗೆ ಮೇಲ್ಮನೆಯಲ್ಲಿಅಂಗೀಕಾರ ಪಡೆಯಲಾಯಿತು.

ಕಲಾಪಕ್ಕೆ ಅರ್ಧಗಂಟೆತಡವಾಗಿ ಆಗಮಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಶಾಸಕ ಪ್ರೀತಂಗೌಡ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಖಂಡಿಸಿ ನ್ಯಾಯ ಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗರಂ ಆದ ಸಭಾಪತಿ, ಏನ್ರೀ… ವಿಧೆಯಕಗಳು ಪಾಸ್ ಆಗಲಿಕ್ಕೆ ಬಿಡಿ, ಈ ಸಂದರ್ಭದಲ್ಲೂಗಲಾಟೆ ಮಾಡಬೇಕಾಎಂದುರೇಗಿದರು.

ಈ ವೇಳೆ ಪ್ರತಿಪಕ್ಷದ ನಾಯಕಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಶಾಸಕರಿಗೆ ರಕ್ಷಣೆಇಲ್ಲದಂತಾಗಿದೆ. ನೀವು ಕುಂತುಕೊಳ್ಳಿ ಎಂದು ಹೇಳುತ್ತೀರಾ ಎಂದಾಗ, ಕುಂತುಕೊಳ್ಳದಿದ್ದರೆ ಕುಣಿರಿ, ಇನ್ನೇನು ಹೇಳಕ್ಕಾಗುತ್ತೆ ನಿಮಗೆ, ಕಲಾಪ ನಡೆಯಲು ಬಿಡಿ ಎಂದರು.

ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ಶಾಸಕರಿಗೆರಕ್ಷಣೆ ನೀಡದಗೂಂಡಾ ಸರ್ಕಾರ ಎಂದುಘೋಷಣೆ ಕೂಗಿದರು.

ಸಚಿವಆರ್.ವಿ.ದೇಶಪಾಂಡೆ ಮಾತನಾಡಿ, ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಸರ್ಕಾರವನ್ನು ಗೂಂಡಾ ಸರ್ಕಾರ ಎಂದು ಕರೆದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸಭಾಪತಿ ಪ್ರತಾಪ್‍ ಚಂದ್ರಶೆಟ್ಟಿ ಅವರು, ನಿಮಗೆ ಕಲಾಪ ತಡೆಯುವುದರಲ್ಲಿ ಸುಖ ಸಿಗುವುದಿದ್ದರೆ ಅದನ್ನೇ ಮಾಡಿ. ಮಹತ್ವದ ಬಿಲ್‍ಗಳನ್ನು ಪಾಸ್ ಮಾಡುವ ಸಂದರ್ಭದಲ್ಲಿ ಕಲಾಪ ತಡೆಯುವುದು ಸರೀನಾ, ಜವಾಬ್ದಾರಿಯಿಲ್ಲದೆ ಮಾತನಾಡಬೇಡಿ, ಏನ್ರೀಇದು ನಿಮ್ಮ ವರ್ತನೆಎರಡು ದಿನಗಳಿಂದ ಇದೇ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದಾವುದಕ್ಕೂಕಿವಿಗೊಡದ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿ ಸರ್ಕಾರದ ವಿರುದ್ಧಘೋಷಣೆಕೂಗುತ್ತಿದ್ದರು.

ಧರಣಿ, ಗದ್ದಲಕ್ಕೂ ಮುನ್ನ 2019ನೆ ಸಾಲಿನ ಭೂ ಸ್ವಾಧೀನ ಪುನರ್ವಸತಿ ಮತ್ತು ಪುನರ್ವಸತಿಯಲ್ಲಿನ ನ್ಯಾಯಯುತ ಪರಿಹಾರ, ಪಾರದರ್ಶಕತೆ ಹಕ್ಕು (ಕರ್ನಾಟಕತಿದ್ದುಪಡಿ ವಿಧೇಯಕ) ಮತ್ತು 2018ನೆ ಸಾಲಿನ ಕರ್ನಾಟಕಋಣ ಪರಿಹಾರ ವಿಧೇಯಕ, ಬಸವ ಕಲ್ಯಾಣಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ-2019, ಎನ್‍ಐಎ ವಿಶ್ವವಿದ್ಯಾಲಯ ವಿಧೇಯಕ-2019ರ ಅಂಗೀಕಾರ ಪಡೆಯಲಾಯಿತು.

ಬಿಜೆಪಿ ಸದಸ್ಯರಗದ್ದಲ-ಪ್ರತಿಭಟನೆ ನಡುವೆಕರ್ನಾಟಕರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ-2019, ಆದಿಚುಂಚನಗಿರಿ ವಿಶ್ವವಿದ್ಯಾಲಯತಿದ್ದುಪಡಿ ವಿಧೇಯಕ-2019, ಆರ್‍ವಿ ವಿಶ್ವವಿದ್ಯಾಲಯ ವಿಧೇಯಕ-2019ಕ್ಕೆ ಅಂಗೀಕಾರದೊರೆಯಿತು.

ಕರ್ನಾಟಕರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ-ತಿದ್ದುಪಡಿ ವಿಧೇಯಕ-2018ಕ್ಕೆ ಆಡಳಿತ ಪಕ್ಷದವರಿಂದಲೇತೀವ್ರಆಕ್ಷೇಪ ವ್ಯಕ್ತವಾಯಿತು.
ಜೆಡಿಎಸ್ ಸದಸ್ಯ ಪುಟ್ಟಣ್ಣ ಈ ವಿಧೇಯಕದಿಂದ ಶಿಕ್ಷಕರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಜಾಸ್ತಿಯಾಗುತ್ತದೆ.ಕಡ್ಡಾಯ ವರ್ಗಾವಣೆ ಎಂಬ ಅಂಶವನ್ನು ತೆಗೆಯಬೇಕು ಎಂದು ಹೇಳಿದರು.

ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಮಾತನಾಡಿ, ಈ ವಿಧೇಯಕ ಜಾರಿಗೊಳಿಸುವುದರಿಂದ ದಲ್ಲಾಳಿಗಳ ಗೇಟ್‍ಓಪನ್‍ಆಗುತ್ತದೆ, ವರ್ಗಾವಣೆ ದಂಧೆ ಮಿತಿಮೀರುತ್ತದೆ, ಈ ಬಿಲ್‍ಅನ್ನು ಸೆಲೆಕ್ಟ್‍ಕಮಿಟಿಗೆ ಒಪ್ಪಿಸಿ ಎಂದು ಆಗ್ರಹಿಸಿದರು.

ಬಿಲ್ ಅಂಗೀಕಾರ ಪಡೆಯಲು ಸಹಮತಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಯವರಗದ್ದಲ ಹೆಚ್ಚಾಯಿತು.ಸಭಾಪತಿ ಪ್ರತಾಪ್‍ ಚಂದ್ರಶೆಟ್ಟಿ ಅವರು ಸದನವನ್ನು ಕೆಲಕಾಲ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ