ಕಲಾಶ್ನಿಕೋವ್ ಬಂದೂಕಗಳ ತಯಾರಿಕೆಗೆ ಕೆಂದ್ರದಿಂದ ಹಸಿರು ನಿಶಾನೆ

ನವದೆಹಲಿ/ಅಮೇಥಿ, ಫೆ.14-ಭಾರತೀಯ ಸೇನಾ ಪಡೆಗಾಗಿ 7.47 ಲಕ್ಷ ಕಲಾಶ್ನಿಕೋವ್(ಅತ್ಯಾಧುನಿಕ ಎಕೆ-47) ರೈಫಲ್‍ಗಳನ್ನು ಹೊಂದುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸಮ್ಮತಿ ನೀಡಿದೆ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರಗಳ ತಯಾರಿಕೆ ಕಾರ್ಖಾನೆ ಮಂಡಳಿ ಮತ್ತು ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ಕಲಾಶ್ನಿಕೋವ್ ರೈಫಲ್‍ಗಳು ಉತ್ಪಾದನೆಯಾಗಲಿವೆ. ಇದಕ್ಕಾಗಿ ಉತ್ತರಪ್ರದೇಶದ ಅಮೇಥಿ ಬಳಿ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಲಾಗುತ್ತಿದೆ.

ಈ ಮಹತ್ವದ ಪ್ರಸ್ತಾವನೆಗೆ ನಿನ್ನೆ ರಾತ್ರಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಅಮೆರಿಕದ ಮೂಲದ ಸಿಗ್ ಸೌರ್ ಸಂಸ್ಥೆಯಿಂದ ಭಾರತೀಯ ಸೇನಾ ಪಡೆದ ಪದಾತಿದಳಕ್ಕೆ 72,400 ಆಕ್ರಮಣಕಾರಿ ರೈಪಲ್‍ಗಳನ್ನು ಹೊಂದಲು ಕೇಂದ್ರ ಸರ್ಕಾರ ಒಡಂಬಡಿಕೆಯೊಂದಕ್ಕೆ ಸಹಿ ಮಾಡಿದ ಕೆಲವೇ ದಿನಗಳಲ್ಲಿ ರಷ್ಯಾ ಸಹಭಾಗಿತ್ವದಲ್ಲಿ ಕಲಾಶ್ನಿಕೋವ್ ಬಂದೂಕುಗಳ ತಯಾರಿಕೆಗೆ ಹಸಿರು ನಿಶಾನೆ ದೊರೆತಿದೆ.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿ 7.62 39 ಮಿ.ಮೀ ಕ್ಯಾಲಿಬರ್‍ನ 6.50 ಲಕ್ಷ ರೈಪಲ್‍ಗಳನ್ನು ತಯಾರಿಸಲಾಗುವುದು. ಉಳಿದ ಬಂದೂಕುಗಳನ್ನು ಜಂಟಿ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಷ್ಯಾದಿಂದ ನೇರವಾಗಿ ಭಾರತಕ್ಕೆ ಪೂರೈಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ