ರಾಜಸ್ತಾನದಲ್ಲಿ ಫೆ.19ರಂದು ಐಎಎಫ್‍ನ ವಾಯುಶಕ್ತಿ-2019 ಪ್ರದರ್ಶನ

ಪೋಕ್ರಾನ್, ಫೆ.14- ರಾಜಸ್ತಾನದ ಪೋಕ್ರಾನ್ನಲ್ಲಿ ಫೆ.16ರಂದು ನಡೆಯುವ ಭಾರತೀಯ ವಾಯುಪಡೆ (ಐಎಎಫ್)ಯ ವಾಯುಶಕ್ತಿ-2019ರಲ್ಲಿ ಧೇಶದ ಯುದ್ದ ನೌಕೆಗಳ ಶಕ್ತಿ-ಸಾಮಥ್ರ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಈ ಶೋನಲ್ಲಿ ಐಎಎಫ್ ತನ್ನ ಹಾಕ್ ಎಂಕೆ-132 ಏಕ ಎಂಜಿನ್ ಚಾಲಿತ ಅತ್ಯಾಧುನಿಕ ಜೆಟ್ ತರಬೇತಿ ವಿಮಾನದ ಸಾಮಥ್ರ್ಯವನ್ನು ಅನಾವರಣಗೊಳಿಸಲಿದೆ. ಇದು ಎಲ್ಲ ಹವಾಮಾನಗಳಲ್ಲೂ ಹಗಲು ಮತ್ತು ರಾತ್ರಿ ಕಾರ್ಯ ನಿರ್ವಹಿಸುವಷ್ಟು ಶಕ್ತವಾಗಿದೆ.

ಹಾಕ್ ಯುದ್ಧ ವಿಮಾನವನ್ನು 2004ರಲ್ಲಿ ಭಾರತೀಯ ವಾಯುಪಡೆ ಸೇವೆಗೆ ಸೇರಿಸಿಕೊಳ್ಳಲಾಗಿತ್ತು. ಯುದ್ಧ ಪೈಲೆಟ್‍ಗಳಿಗೆ ಜೆಟ್ ವಿಮಾನಗಳ ಹಾರಾಟ ಮತ್ತು ದಾಳಿ ನಡೆಸುವ ಬಗ್ಗೆ ತರಬೇತಿ ನೀಡುವ ಜೊತೆಗೆ ವಿವಿಧ ಶಸ್ತ್ರಗಳಿಂದ ವೈರಿಗಳ ಮೇಲೆ ಆಕ್ರಮಣ ನಡೆಸುವ ಅಗಾಧ ಸಾಮಥ್ರ್ಯವನ್ನು ಇದು ಹೊಂದಿದೆ. ಈಗ ಈ ವಿಮಾನವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಇದರ ಶಕ್ತಿ ಮತ್ತು ಕಾರ್ಯ ನಿರ್ವಹಣೆ ಮತ್ತಷ್ಟು ವೃದ್ಧಿಯಾಗಿದೆ.

ಬ್ರಿಟನ್ ಮೂಲದ ತಂತ್ರಜ್ಞಾನ ಒಳಗೊಂಡ ಇದು ಅತ್ಯಾಧುನಿಕ ಜೆಟ್ ಮತ್ತು ತರಬೇತಿ ನೀಡುವ ವಿಮಾನವನ್ನಾಗಿ ಬಳಸಬಹುದಾಗಿದೆ.

ರಾಜಸ್ತಾನದ ಜೈಸಲ್ಮೇರ್‍ನ ಪೋಕ್ರಾನ್ನ ಪರೀಕ್ಷಾರ್ಥ ವಲಯದಲ್ಲಿ ನಡೆಯುವ ವಾಯುಶಕ್ತಿ-2019 ಪ್ರದರ್ಶನದಲ್ಲಿ ಭಾರತೀಯ ರಕ್ಷಣಾ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು, ಮಾನವ ರಹಿತ ನೌಕೆಗಳು ಮತ್ತು ಡ್ರೋಣ್‍ಗಳ ಶಕ್ತಿ ಸಾಮಥ್ರ್ಯ ಪ್ರದರ್ಶನವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ