ಹಾಸನ: ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕನ ಮನೆ ಮುಂದೆ ನಿನ್ನೆ ನಡೆಸಿದ ಜೆಡಿಎಸ್ ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಎಂಬುದು ತಿಳಿದುಬಂದಿದೆ. ಅಲ್ಲದೇ ಬಿಜೆಪಿಯೇ ಈ ಗಲಾಟೆಗೆ ಪ್ರಚೋಚನೆ ನೀಡಿತು ಇದು ಯೋಜನೆ ಪ್ರಕಾರ ನಡೆದ ಗಲಭೆ ಎಂಬುದು ಬೆಳಕಿಗೆ ಬಂದಿದೆ.
ಶಾಸಕನ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿಯೇ ಪ್ಲಾನ್ ಮಾಡಿತು. ಅಲ್ಲದೇ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಲು ಶಾಸಕರ ಬೆಂಬಲಿಗರು ಆಮಿಷ ಒಡ್ಡಿದ್ದರು ಎನ್ನಲಾಗಿದೆ.
ಆಡಿಯೋ ಪ್ರಕರಣದಿಂದ ಮುಜುಗರಕ್ಕೆ ಉಂಟಾಗಿದ್ದ ಬಿಜೆಪಿ ಈ ಘಟನೆಯನ್ನು ತಮ್ಮ ಲಾಭಾಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಇದಕ್ಕಾಗಿ ಜೆಡಿಎಸ್ನ ಕಾರ್ಯಕರ್ತರ ನಡುವೆ ನಿಂತು ಕಲ್ಲು ತೂರಾಟ ನಡೆಸುವಂತೆ ಒತ್ತಾಯಿಸಿದ್ದರು. ಈ ಕುರಿತು ಆಡಿಯೋ ಸಂಭಾಷಣೆ ಲಭ್ಯವಾಗಿದ್ದು. ಈ ಆಡಿಯೋ ಸಂಭಾಷಣೆಯನ್ನು ಇದೀಗ ಬಿಡುಗಡೆ ಮಾಡಲು ಜೆಡಿಎಸ್ ಮುಂದಾಗಿದೆ. ಇಂದು ಮಧ್ಯಾಹ್ನ ಪ್ರೆಸ್ ಕ್ಲಬ್ನಲ್ಲಿ ಇದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಬಿಜೆಪಿ ಶಾಸಕನಿಗೆ ಮತ್ತೊಮ್ಮೆ ಕಂಟಕ ಎದುರಾಗಿದೆ.
ಪ್ರೀತಂಗೌಡ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮರಳುವಾಗ ಈ ಹಲ್ಲೆ ಪ್ರಕರಣ ನಡೆದಿದೆ. ಹಲ್ಲೆಗೆ ಒಳಗಾಗಿದ್ದ ರಾಹುಲ್ ಕಿಣಿ ಬಿಜೆಪಿ ಕಾರ್ಯಕರ್ತ ಎಂಬ ಸುದ್ದಿಕೂಡ ಈಗ ಹೊರಬಿದ್ದಿದೆ.
ನಾಪತ್ತೆಯಾದ ಗಾಯಾಳು
ನಿನ್ನೆ ಘಟನೆಯಲ್ಲಿ ಹಲ್ಲೆಗೆ ಒಳಗಾದ ಗಾಯಾಳು ರಾಹುಲ್ ಕಿಣಿ, ಅಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ 12.30 ಕ್ಕೆ ಆಸ್ಪತ್ರೆಯಿಂದ ಬೆಂಗಳೂರಿಗೆ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದರು.
ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು ಕೂಡ ಆತ ಆ ಆಸ್ಪತ್ರೆಗೆ ದಾಖಲಾಗಿಲ್ಲ . ಅಲ್ಲದೇ ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಈತ ದಾಖಲಾಗಿಲ್ಲ ಎಂಬುದು ತಿಳಿದುಬಂದಿದೆ. ಆತ ಎಲ್ಲಿದ್ದಾನೆ ಎಂಬುದು ಕೂಡ ತಿಳಿದು ಬಂದಿಲ್ಲ.