ನೈಜೀರಿಯಾ,ಫೆ.14-ನೈಜೀರಿಯಾದ ಬೋರ್ನೊ ರಾಜ್ಯದ ಗವರ್ನರ್ ಕಾಶಿಮ್ ಶೆಟ್ಟಿಮಾ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲಿನ ವಾಹನದ ಮೇಲೆ ಬೊಕೊ ಹರಮ್ನ ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟರು ಹಾಗೂ ಇತರೆ ಹಲವರನ್ನು ಉಗ್ರಗಾಮಿಗಳು ಅಪಹರಿಸಿದ್ದಾರೆ.
ನಾಗರಿಕ ಸೇನೆಯ ಸದಸ್ಯರು ಬೆಂಗಾವಲು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ ಭಯೋತ್ಪಾದಕರ ಪ್ರಭಲ ಪ್ರದೇಶವಾದ ಡಿಕ್ವಾ ಪಟ್ಟಣದ ಹತ್ತಿರ ಭಯೋತ್ಪಾದಕರು ಹೊಂಚುಹಾಕಿ ಈ ದಾಳಿಯನ್ನು ನಡೆಸಿದ್ದಾರೆ. ಈ ಪ್ರದೇಶವು ಉಗ್ರಗಾಮಿಗಳ ಹತೋಟಿಯಲ್ಲಿದೆ. ಈ ದಾಳಿಯು ಬೆಂಗಾವಲು ಪಡೆಯ ಕಡೆಯ ವಾಹನದ ಮೇಲೆ ನಡೆದಿದೆ.
ಗವರ್ನರ್ ಸ್ಥಾನದಿಂದ ನಿರ್ಗಮಿಸುತ್ತಿರುವ ಶೆಟ್ಟಮಾ ಅವರ ಜೊತೆ ಅವರ ಸಂಭಾವ್ಯ ಉತ್ತರಾಧಿಕಾರಿ ಬಾಬಾಗಣ ಉಮಾರು ಸಹ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ದಾಳಿಯಲ್ಲಿ ಯಾವುದೇ ಅಪಾಯವಿಲ್ಲದೇ ಇಬ್ಬರೂ ಪಾರಾದರು.