ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಡೆರೇಷನ್ ಅಧ್ಯಕ್ಷ ವಿಜಯ್‍ಕುಮಾರ್

ಬೆಂಗಳೂರು, ಫೆ.13- ನೇರವೇತನ ಪೌರಕಾರ್ಮಿಕರನ್ನು ಕೂಡಲೇ ಐಪಿಡಿ ಸಾಲಪ್ಪವರದಿಯಂತೆ ಖಾಯಂಗೂಳಿಸಿ, ಸಕಲ ಸವಲತ್ತುಗಳನ್ನು ನೀಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ದಿ ಬೆಂಗಳೂರು ಸಿಟಿ ಕಾಪೆರ್Çರೇಷನ್ ವರ್ಕರ್ಸ್ ಫೇಡರೇಷನ್ ಒತ್ತಾಯಿಸಿದೆ.

ಸುದ್ದಿಗೋಷ್ಟಿಯಲ್ಲಿ ಫೆಡರೇಷನ್ ಅಧ್ಯಕ್ಷ ಕೆ.ಸಿ. ವಿಜಯಕುಮಾರ್ ಮಾತನಾಡಿ ಪೌರ ಕಾರ್ಮಿಕರನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು, ಬಯೋ ಮೆಟ್ರಿಕ್ ಹಾಜರಾತಿಯಿಂದ ಆಗುತ್ತಿರುವ ವೇತನ ಕಡಿತವನ್ನು ಸರಿಪಡಿಸಬೇಕು ಎಂದರು.

ಖಾಯಂ, ನೇರವೇತನ , ನಿವೃತ್ತಿ ಪೌರಕಾರ್ಮಿಕರಿಗೆ ಶಾಶ್ವತ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಅನುಷ್ಠಾನ ಮಾಡಬೇಕು, ಖಾಯಂ ಹಿರಿಯ ಪೌರ ಕಾರ್ಮಿಕರಿಗೆ ಸೇವಾ ಜೇಷ್ಟತೆಯ ಮೇಲೆ ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.ನಾವು ಬಹಳ ವರ್ಷಗಳಿಂದ ಹೋರಾಟ ಮಾಡಿದರು ಸಹ ಯಾವುದೇ ರೀತಿ ಅನುಕೂಲವಾಗಿಲ್ಲ ಆದ್ದುದರಿಂದ ಇನ್ನೂ 15ದಿನಗಳ ಒಳಗೆ ಈಡೇರಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಫೆಡರೇಷನ್ ಪದಾಧಿಕಾರಿಗಳಾದ ಮುರಳಿ, ಅಶೋಕ್ ಸಾಲಪ್ಪ , ಜಯರಾಂ , ಎಂ.ಸಿ. ಶ್ರೀನಿವಾಸï,ಎಂ ರ್ಆ , ಶ್ರೀರಾಮ್ , ಕೆ.ಬಿ. ನರಸಿಂಹ ಸೇರಿದಂತೆ ಮತಿತ್ತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ