ಬೆಂಗಳೂರು, ಫೆ.13-ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಒಬ್ಬರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಪ್ರಸಂಗ ನಡೆದಿದೆ.
ಮಾರಪ್ಪ ಎಂಬ ರೈತನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಕಾರಣ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಇದರಿಂದ ಕೆಲಕಾಲ ಆತಂಕದ ಕಾಲ ನಿರ್ಮಾಣವಾಗಿತ್ತು.
ಶಿವಮೊಗ್ಗ, ಗದಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆ ಗಳಿಂದ ಸಾವಿರಾರು ಮಂದಿ ರೈತರು ರೈಲುಗಳಲ್ಲಿ ಆಗಮಿಸಿ ನಂತರ ಫ್ರೀಡ್‍ಂ ಪಾರ್ಕ್‍ವರೆಗೆ ಪಾದಯಾತ್ರೆ ಕೈಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.ಫ್ರೀಡ್‍ಂ ಪಾರ್ಕ್‍ನಿಂದ ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದ್ದು ಈ ವೇಳೆ ರೈತ ಮಾರಪ್ಪ ಕುಸಿದು ಬಿದ್ದರು.
ಯಾವುದೇ ಷರತ್ ಇಲ್ಲದೆ ಸಾಲಮನ್ನಾ ಮಾಡಬೇಕು ಫಸಲ್ ಬೀಮಾ ಯೋಜನೆ ನ್ಯೂನತೆಯನ್ನು ಸರಿಪಡಿಸಬೇಕು.ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಕೆಲಸ ಸಿಗಬೇಕು. ಮಹಾದಾಯಿ, ಕಳಸಾಬಂಡೂರಿ ಯೋಜನೆ ಶೀಘ್ರವೇ ಅನುಷ್ಠಾನ ಮಾಡಬೇಕು ಎಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರೈತ ನಾಯಕ ಪೆÇ್ರ.ನಂಜುಂಡಸ್ವಾಮಿ ಅವರ ಹುಟ್ಟ ಹಬ್ಬದ ಹಿನ್ನೆಲೆಯಲ್ಲಿ ರೈತೋತ್ಸವ ಆಚರಿಸಿ ಸರಕಾರದ ಗಮನ ಸೆಳೆದರು.
ಮಹಾದಾಯಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಯಾಮಾರಿಸುತ್ತಿವೆ ಮಹಾದಾಯಿ ನ್ಯಾಯಾಧೀಕರಣ ತೀರ್ಪಿನ ಪ್ರಕಾರ ನೀರನ್ನು ಬಿಡಲೇಬೇಕು.ರಾಜ್ಯ ಸರ್ಕಾರ ಹೆಚ್ಚುವರಿ ನೀರಿಗಾಗಿ ಮೇಲ್ಮನವಿ ಸಲ್ಲಿಸಿದೆ. ಆದರೆ ನ್ಯಾಧೀಕರಣ ಹೇಳಿದ ನೀರನ್ನು ಮೊದಲು ನಮಗೆ ಒದಗಿಸಲಿ ಎಂದು ರೈತರು ಹೇಳಿದರು.
ರಾಜ್ಯದ ಬಜೆಟ್‍ನಲ್ಲಿ ಮಹಾದಾಯಿಗಾಗಿ ಒಂದು ಪೈಸೆ ಅನುದಾನ ಇಟ್ಟಿಲ್ಲ ಸರಕಾರ ತಕ್ಷಣ ಎಚ್ಚೆತ್ತು ಮಹಾದಾಯಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತರು ಒಕ್ಕೊರಿಲಿನಿಂದ ಎಚ್ಚರಿಸಿದರು.