ಬೆಂಗಳೂರು, ಫೆ.13-ಆಪರೇಷನ್ ಕಮಲದ ವಿವಾದಿತಆಡಿಯೋ ಪ್ರಕರಣದಿಂದಾಗ ವಿಧಾನಸಭೆಯ ಕಲಾಪ ಇಂದು ಧರಣಿ ಗದ್ದಲದಿಂದ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾಯಿತು.
ಈ ನಡುವೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡರ ಮನೆಯ ಮೇಲಿನ ದಾಳಿ ಪ್ರಕರಣವನ್ನು ಬಿಜೆಪಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತ ಪಡಿಸಿದರು. ಬೋಜನ ವಿರಾಮದ ನಂತರ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರುಬೋಜನ ವಿರಾಮಕ್ಕೂ ಮೊದಲಿನ ಅಧಿವೇಶನದಲ್ಲಿ ಆರಂಭಿಸಿದ್ದ ಧರಣಿಯನ್ನು ಮುಂದುವರೆಸಿದರು.
ಈ ನಡುವೆ ಸಭಾಧ್ಯಕ್ಷ ರಮೇಶ್ ಕುಮಾರ್ಅವರು ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿ, ನಿನ್ನೆ ನಾನು ಸದಸನದಲ್ಲಿ ನೀಡಿದ್ದ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆಕ್ಷಮೆ ಕೇಳುತ್ತೇನೆ ಎಂದರು.
ಸಾಂದರ್ಭಿಕವಾಗಿ ನಿನ್ನೆಅತ್ಯಾಚಾರ ಸಂತ್ರಸ್ಥೆಯ ಉದಾಹರಣೆಕೊಟ್ಟೆ.ಅದರಲ್ಲಿಯಾರನ್ನೂ ನೋಯಿಸುವ ಉದ್ದೇಶಇರಲಿಲ್ಲ.ತಮ್ಮ ಮಾತಿನಿಂದ ನೊಂದ ಮಹಿಳಾ ಶಾಸಕರುಇಂದುತಮ್ಮನ್ನು ಭೇಟಿ ನಿನ್ನೆ ಘಟನೆಗಳ ಬಗ್ಗೆ ಗಮನ ಸೆಳೆದಿದ್ದಾರೆ.ತಾವುಆಡಿದ ಮಾತಿನಿಂದ ಮಹಿಳೆಯರಿಗೆ ಅವಮಾನ ಮಾಡಿದಂತಾಗಿದೆಎಂದು ಸಂಕಟತೋಡಿಕೊಂಡಿದ್ದಾರೆ ಎಂಬ ವಿಚಾರವನ್ನು ಸದನದ ಗಮನಕ್ಕೆ ತಂದರಲ್ಲದೆ, ನಾನು ಯಾವುದೇದುರುದ್ದೇಶದಿಂದ ಮಾತನಾಡಿಲ್ಲ. ಆ ರೀತಿಯ ಉದ್ದೇಶವಿದ್ದಿದ್ದರೆ ನನ್ನತಾಯಿ ವಿಚಾರವನ್ನು ಏಕೆ ಪ್ರಸ್ತಾಪ ಮಾಡುತ್ತಿದ್ದೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತಗೌರವ ಉಳ್ಳವನ್ನಾಗಿದ್ದೇನೆ. ಯಾರಿಗಾದರೂ ನೋವಾಗಿದ್ದರೆ, ಕ್ಷಮೆಯಾಚಿಸುತ್ತೇನೆಎಂದರು. ಎಲ್ಲರೂಅಕ್ಕತಂಗಿಯರು, ತಾಯಂದಿರ ಸಮಾನ, ಯಾವೊಬ್ಬ ಹೆಣ್ಮಮಗುವಿಗೂ ನೋವುಂಟು ಮಾಡುವ ಜಾಯಮಾನತಮ್ಮದಲ್ಲ. ನಮ್ಮ ವ್ಯವಸ್ಥೆ ಹೇಗಿದೆಎಂದರೆ, ತಣ್ಣೀರನ್ನು ಆರಿಸಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮಾಧ್ಯಮಗಳಿಗೂ ಯಾವುದೇ ಮಸಾಲೆ ಸುದ್ದಿ ಇಲ್ಲವಾದ್ದರಿಂದ ನಾವಾಡಿದ ಮಾತಿನ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆಎಂದರು.
ಮಹಿಳಾ ಶಾಸಕರುಜನಸೇವೆಯನ್ನು ನಮ್ಮೊಟ್ಟಿಗೆ ಮಾಡಬೇಕಾಗಿದೆ.ನಿಮ್ಮರಕ್ಷಣೆ ನಮ್ಮೆಲ್ಲರ ಮೇಲಿದೆ.ಅದಕ್ಕೆಚ್ಯುತಿ ಬಾರದಂತೆತಮ್ಮಜವಾಬ್ದಾರಿಯನ್ನು ನಿರ್ವಹಿಸುವ ಭರವಸೆ ನೀಡಿದರು.ಆ ಸಂದರ್ಭಕ್ಕನುಗುಣವಾಗಿಇಲ್ಲಿ ನಡೆದಿದ್ದಎಲ್ಲಾ ಚರ್ಚೆಗಳನ್ನು ಕಡತದಿಂದತೆಗೆಯುವಂತೆ ಆದೇಶಿಸುತ್ತಿದ್ದೇನೆ ಎಂದು ಹೇಳಿದರು.
ನಂತರ ಯಥಾಸ್ಥಿತಿಯಂತೆ ಧರಣಿ ಮುಂದುವರೆದಿದೆಎಂದು ಹೇಳಿದಾಗ ಸದನದ ಬಾವಿಯಲ್ಲಿ ನಿಂತಿದ್ದ ಬಿಜೆಪಿ ಶಾಸಕರುಘೋಷಣೆ ಕೂಗಿ ಗದ್ದಲ ಆರಂಭಿಸಿದರು. ಧರಣಿಯಿಂದತಮ್ಮ ಸ್ವಸ್ಥಾನಕ್ಕೆ ಮರಳಿದ ಬಿಜೆಪಿಯ ಶಾಸಕ ಆರ್.ಅಶೋಕ್ಅವರು, ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡರ ಮನೆಯ ಮೇಲೆ ಕಲ್ಲುತೂರಲಾಗಿದೆ. ಅವರ ಪೋಷಕರು ಮತ್ತು ಸಂಬಂಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಈ ಸದನದಚರ್ಚೆಯ ವಿಷಯಗಳು ಇಲ್ಲಿಗೆ ಸೀಮಿತವಾಗಿರಬೇಕು. ಅದನ್ನು ಬಿಟ್ಟುಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸುವಗೂಂಡಾ ಸಂಸ್ಕøತಿಯನ್ನು ಸರ್ಕಾರಅನುಸರಿಸುತ್ತಿದೆ.ನೀವು ಗೂಂಡಾಗಿರಿ ಮಾಡುವುದಾದರೆ ಬನ್ನಿ ಅದನ್ನ ನಾವು ನೋಡಿಯೇ ಬಿಡುತ್ತೇವೆಎಂದು ಸವಾಲು ಹಾಕಿದರು.
ಬಿಜೆಪಿಯ ಶಾಸಕ ಸಿ.ಟಿ.ರವಿ ಮಾತನಾಡಿ, ಆಡಿಯೋ ಪ್ರಕರಣದತನಿಖೆ ನಡೆಯುವ ಮೊದಲೆ ಪ್ರೀತಂಗೌಡರ ಮನೆಯ ಮೇಲೆ ದಾಳಿ ನಡೆದಿದೆ.ಶಾಸಕರನ್ನು ಮುಗಿಸುತ್ತೇವೆ ಎಂಬ ಜೀವ ಬೆದರಿಕೆ ಹಾಕಲಾಗಿದೆಎಂದು ಸದನದ ಗಮನಕ್ಕೆ ತಂದರು.
ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪಅವರು ಮಾತನಾಡಿ, ಮುಖ್ಯಮಂತ್ರಿಅವರಕುಮ್ಮಕ್ಕಿನಿಂದಲೇ ಹಾಸನದಲ್ಲಿ ಪ್ರೀತಂಗೌಡರ ಮನೆಯ ಮೇಲೆ ದಾಳಿ ನಡೆದಿದೆ.ಇಂತಹಘಟನೆಯನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.ಶಾಸಕರತಾಯಿಯನ್ನು ದುಷ್ಕರ್ಮಿಗಳು ಎಳೆದಾಡಿದ್ದಾರೆ. ಒಬ್ಬ ಕಾರ್ಯಕರ್ತನಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆಎಂದುಆಕ್ರೋಶ ವ್ಯಕ್ತ ಪಡಿಸಿದರು.
ಇದಕ್ಕೆ ಪ್ರತಿಯಾಗಿ ಸಚಿವಕೃಷ್ಣಬೈರೇಗೌಡಅವರುಬಿಜೆಪಿ ಕಲಾಪ ನಡೆಯಲು ಅವಕಾಶ ನೀಡದೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆಎಂದು ಆರೋಪಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಮೊದಲು ಬಿಜೆಪಿ ಶಾಸಕರುಧರಣಿಯನ್ನು ಕೈ ಬಿಟ್ಟು ಸ್ವಸ್ಥಾನಕ್ಕೆ ಬಂದು ಕುಳಿತುಕೊಂಡು ಚರ್ಚೆ ಆರಂಭಿಸಲಿ. ಬಾವಿಯಲ್ಲಿಧರಣಿ ಮಾಡುತ್ತಾ ಚರ್ಚೆ ಮಾಡುವುದು ಸರಿಯಲ್ಲಎಂದುಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷಗಳ ಶಾಸಕರುಗದ್ದಲವೆಬ್ಬಿಸಿದಾಗ, ಆರೋಪ, ಪ್ರತ್ಯಾರೋಪದಿಂದಗೊಂದಲದ ಸ್ಥಿತಿ ನಿರ್ಮಾಣವಾಯಿತು. ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳಿದ ಸ್ಥಿತಿ ನಿರ್ಮಾಣವಾದಾಗ ಸಭಾಧ್ಯಕ್ಷರುಕಲಾಪವನ್ನು ನಾಳೆಗೆ ಮುಂದೂಡಿದರು.