ಬೆಂಗಳೂರು, ಫೆ.13- ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭದಿಂದ ಕೇರಳ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯವೆನಿಸುತ್ತಿರುವ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ಕಣ್ಣೂರು ಪ್ರವಾಸಿಗಳ ಅಚ್ಚುಮೆಚ್ಚಿನ ತಾಣವಾಗಲು ಸಜ್ಜಾಗಿದೆ.
ಸ್ವಾದಿಷ್ಟ ಮಾಪ್ಲಾ ಆಹಾರದ ತವರು.ಕೋಟೆಗಳು ಹಾಗೂ ಜಾನಪದ ಕಥೆಗಳ ತಾಣದಲ್ಲಿ ಹೊಸ ವಿಮಾನ ನಿಲ್ದಾಣ ಕೊಡಗು, ಕೊಯಮತ್ತೂರು ಮತ್ತು ಮೈಸೂರುಗಳ ಗಡಿಗಳನ್ನು ಹೊಂದಿರುವ ಮಲಬಾರ್ ದಕ್ಷಿಣ ಭಾರತದ ಹೊಸ ಪ್ರವಾಸೋದ್ಯಮ ಹೆದ್ದಾರಿಯಾಗುವ ಭರವಸೆ ಹೊಂದಿದೆ.
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಿಂದ ವಿಶ್ವ ಈಗ ಮಲಬಾರ್ನ ವಿಸ್ಮಯಗಳಿಗೆ ಕಣ್ಣು ತೆರೆಯುವ ಸದವಕಾಶ ಒದಗಿದ್ದು, ಕೇರಳ ಪ್ರವಾಸೋದ್ಯಮ ಬೇಕಲ್ ಮತ್ತು ವಯನಾಡಿನಂತಹ ಉತ್ತರ ಕೇರಳದ ಪ್ರದೇಶಗಳ ಅಭಿವೃದ್ಧಿಯೊಂದಿಗೆ ಕಣ್ಣೂರು ಮತ್ತು ಕಾಸರಗೋಡಿನ ವಳಿಯಪರಂಬಾ ಹಿನ್ನೀರು, ಕುಪ್ಪಂ ಮತ್ತು ರಾಣಿಪುರಂನಂತಹ ಸಣ್ಣ ಪ್ರದೇಶಗಳಿಗೆ ಈಗ ಆದ್ಯತೆ ನೀಡುತ್ತಿದೆ ಎಂದು ಕೇರಳದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.
ಕೇರಳ ಟೂರಿಸಂ ಈಗ 2019ರಲ್ಲಿ ಮತ್ತೊಂದು ಮಹತ್ವಾಕಾಂಕ್ಷೆಯ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದು, ಭಾರತದಾದ್ಯಂತ 10 ನಗರಗಳಲ್ಲಿ ಪಾಲುದಾರಿಕೆ ಸಭೆಗಳ ಸರಣಿ ಆಯೋಜಿಸಿದೆ.ಲೂಧಿಯಾನ, ಚಂಡೀಗಢ, ದೆಹಲಿ ಮತ್ತು ಜೈಪುರದಲ್ಲಿ ಗಮನಾರ್ಹ ಭಾಗವಹಿಸುವಿಕೆ ಕಂಡ ನಂತರ ಕೇರಳ ಪ್ರವಾಸೋದ್ಯಮ ಅಧಿಕಾರಿಗಳು ಬೆಂಗಳೂರಿನಲ್ಲಿ ಪಾಲುದಾರಿಕೆ ಸಭೆಗಳಲ್ಲಿ ಭಾಗವಹಿಸಲು ಸಂತೋಷ ಪಡುತ್ತಾರೆ.ಫೆಬ್ರವರಿಯಲ್ಲಿ ಹೈದರಾಬಾದ್, ಕೊಲ್ಕತಾ, ವಿಶಾಖಪಟ್ಟಣ, ಚೆನ್ನೆ ೈ ಮತ್ತು ಮದುರೈಗಳಲ್ಲಿ ಈ ಸಭೆಗಳು ನಡೆಯಲಿವೆ.
ಕೇರಳದ ಸಾಂಪ್ರದಾಯಿಕ ಕಲಾ ವಿಧಾನಗಳ ಸಾಂಸ್ಕøತಿಕ ವೈಶಿಷ್ಟ್ಯ ಮತ್ತು ಅದರ ಆಕರ್ಷಕ ಪ್ರವಾಸೋದ್ಯಮ ಉತ್ಪನ್ನಗಳ ಸಂಯೋಜನೆಯ ಈ ಪಾಲುದಾರಿಕೆ ಸಭೆಗಳು ಆಯಾ ನಗರಗಳಲ್ಲಿ ಪ್ರವಾಸೋದ್ಯಮ ವಹಿವಾಟಿಗೆ ಕೇರಳದ 40 ಟೂರಿಸಂ ಉದ್ಯಮದ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ.
ಈ ಪಾಲುದಾರಿಕೆ ಸಭೆ 30 ನಿಮಿಷಗಳ ಸಾಂಸ್ಕøತಿಕ ಕಾರ್ಯಕ್ರಮ ಹೊಂದಿದ್ದು, ಕೇರಳದ ಕಲಾಪ್ರಕಾರಗಳ ದೃಶ್ಯ ನಿರೂಪಣೆ, ಅಲ್ಲಿನ ಗ್ರಾಮಜೀವನ ಹಾಗೂ ಜಾನಪದವನ್ನು ಬಿಂಬಿಸುತ್ತದೆ.