ಬೆಂಗಳೂರು, ಫೆ.13-ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯ ಬ್ರಹ್ಮಾಸ್ತ್ರಕ್ಕೆ ಬೆದರಿದ ಕಾಂಗ್ರೆಸ್ನ ಅತೃಪ್ತರ ದಂಡು ಮುಂಬೈನಿಂದ ಬೆಂಗಳೂರಿಗೆ ವಾಪಸ್ ಮರಳಿದೆ.
ಕಳೆದ 1 ತಿಂಗಳಿನಿಂದಲೂ ಮುಂಬೈ ಹೊಟೇಲ್ನಲ್ಲಿ ಉಳಿದುಕೊಂಡು ಸಮ್ಮಿಶ್ರ ಸರ್ಕಾರದ ಪತನಕ್ಕೆ ಸ್ಕೆಚ್ ಹಾಕಿದ್ದ ಅತೃಪ್ತ ಶಾಸಕರಾದ ರಮೇಶ್ ಜಾರಕಿ ಹೊಳಿ, ನಾಗೇಂದ್ರ, ಮಹೇಶ್ ಕುಮಟಹಳ್ಳಿ ಹಾಗೂ ಉಮೇಶ್ ಜಾಧವ್ ಕೊನೆಗೂ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಫೆ.15ರವರೆಗೆ ವಿಧಾನಸಭೆಯ ಅಧಿವೇಶನದಲ್ಲಿ ಭಾಗವಹಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ನಾಲ್ಕು ಮಂದಿ ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು.
ಈಗಾಗಲೇ 2 ಬಾರಿ ನಡೆದ ಶಾಸಕಾಂಗ ಸಭೆಗೆ ವಿಪ್ ನೀಡಿದ್ದರೂ ಅತೃಪ್ತ ನಾಲ್ವರು ಶಾಸಕರು ಅದನ್ನು ಉಲ್ಲಂಘಿಸಿದ್ದಲ್ಲದೆ, ಅಧಿವೇಶನದಿಂದಲೂ ಹೊರಗುಳಿದಿದ್ದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪರಿಚ್ಛೇದ 10ರಡಿ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್ ಅವರಿಗೆ ದೂರು ನೀಡಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆಯ ದಂಡನೆಯಿಂದ ತಪ್ಪಿಸಿಕೊಳ್ಳಲು ಈ ನಾಲ್ವರು ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಇಂದು ಅಥವಾ ನಾಳೆ ರಾಜ್ಯ ಬಜೆಟ್ ಹಾಗೂ ರಾಜ್ಯಪಾಲರ ವಂದನಾ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಬೇಕಿದೆ.ಈ ಎರಡೂ ಪ್ರಮುಖ ಘಟ್ಟಗಳಲ್ಲಿ ರಾಜ್ಯದ ಎಲ್ಲಾ ಶಾಸಕರು ಹಾಜರಿರಬೇಕು. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ತಮ್ಮ ತಮ್ಮ ಶಾಸಕರಿಗೆ ವಿಪ್ ಸಹ ನೀಡಿದೆ.
ಶಾಸಕಾಂಗ ಸಭೆಗೆ ಹಾಜರಾಗದೆ ಇರುವುದನ್ನು ಸಮರ್ಥಿಸಿಕೊಂಡು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಅತೃಪ್ತ ಶಾಸಕರು ಪಾರಾಗಬಹುದಿತ್ತು. ಆದರೆ ವಿಧಾನಮಂಡಲದ ಅಧಿವೇಶನಕ್ಕೂ ಗೈರು ಹಾಜರಾಗಿರುವುದರಿಂದ ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಹಾಗಾಗಿ ದಂಡನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಶಾಸಕರು ಹಿಂತಿರುಗಿದ್ದಾರೆ.
ಶಾಸಕಾಂಗ ಸಭೆಯ ಗೈರು ಹಾಜರಿಗೆ ಕಾರಣ ನೀಡಬಹುದಾಗಿದ್ದರೂ ಅಧಿವೇಶನ ವಿಷಯ ಬಂದಾಗ ಹಾಗಾಗಲು ಸಾಧ್ಯವಿಲ್ಲ. ವೋಟಿಂಗ್ ಮಾಡಬೇಕಿದ್ದು, ಒಂದು ವೇಳೆ ಬೇರೆ ಪಕ್ಷಕ್ಕೆ ಮತ ಚಲಾಯಿಸಿದರೂ ಅನರ್ಹತೆಯಾಗುವ ಸಾಧ್ಯತೆ ಇದೆ.
ಈ ಎಲ್ಲ ಕಾರಣಗಳಿಂದಾಗಿ ಶಾಸನ ಸಭೆಯಲ್ಲಿ ಈ ಬಗ್ಗೆ ದೂರು ದಾಖಲಾಗಿ ಅನರ್ಹಗೊಳಿಸಿದರೆ 6 ವರ್ಷ ಚುನಾವಣೆಯಿಂದ ಉಚ್ಛಾಟಿತವಾಗಬೇಕಾಗುತ್ತದೆ. ಹಾಗಾಗಿ ಇಂತಹ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಶಾಸಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಲಯದಲ್ಲೂ ವರಿಷ್ಠರ ಮಟ್ಟದಲ್ಲಿ ಮಾತುಕತೆ ನಡೆದಿದ್ದು, ಇಷ್ಟು ದಿನ ಸಿಎಲ್ಪಿ ಸಭೆಗೆ ಗೈರು ಹಾಜರಾಗದಿದ್ದರೂ, ಅಧಿವೇಶನದಲ್ಲಿ ಪಕ್ಷಕ್ಕೆ ನಿಷ್ಠರಾಗಿ ಉಳಿದರೆ ಅವರಿಗೆ ಅನರ್ಹತೆಯಿಂದ ವಿನಾಯಿತಿ ನೀಡುವ ಬಗ್ಗೆಯೂ ರಾಜ್ಯ ಉಸ್ತುವಾರಿ ವೇಣುಗೋಪಾಲ್