ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದು, ಇಂದು ಈ ಪ್ರಕರಣ ತನಿಖೆ ಕುರಿತು ಸರ್ಕಾರದಿಂದ ಅಧಿಸೂಚನೆ ನೀಡಲಾಗುವುದು.
ಸ್ಪೀಕರ್ ಹೆಸರು ಉಲ್ಲೇಖವಾಗಿರುವುದು ಹಕ್ಕುಚ್ಯುತಿ ವಿಚಾರವಾಗಿದ್ದು ಈ ಕುರಿತು ತನಿಖೆಯಾಗಬೇಕು ಎಂದು ಆಡಳಿತ ಪಕ್ಷದ ನಾಯಕರು ಒತ್ತಾಯಿಸಿದರೆ, ವಿಪಕ್ಷಗಳು ಮಾತ್ರ ಸರ್ಕಾರ ನಡೆಸುವ ತನಿಖೆಯಲ್ಲಿ ತಮಗೆ ನಂಬಿಕೆ ಇಲ್ಲ. ಮುಖ್ಯಮಂತ್ರಿಗಳೆ ತಪ್ಪಿತಸ್ಥರಾಗಿರುವ ಈ ಪ್ರಕರಣವನ್ನು ಅವರು ತನಿಖೆಗೆ ಒಪ್ಪಿಸುವುದಕ್ಕೆ ನಮಗೆ ಒಪ್ಪಿಗೆ ಇಲ್ಲ ಎಂದರು. ಆದರೆ, ಸ್ಪೀಕರ್ ಇದನ್ನು ತನಿಖೆ ಬಗ್ಗೆ ನಾನು ಸಲಹೆ ನೀಡಬಹುದು ಹೊರತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಎಸ್ಐಟಿ ರಚನಾ ತಂಡ, ತನಿಖೆ ಸ್ವರೂಪದ ಬಗ್ಗೆ ಇಂದಿನ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ತಿಳಿಸಲಿದ್ದಾರೆ. ಇಂದು ಈ ಕುರಿತು ಅಧಿಸೂಚನೆ ಹೊರಡಿಸಲಿರುವ ಅವರು ಎಡಿಜಿಪಿ ಗ್ರೇಡ್ ಅಧಿಕಾರಿ ನೇತೃತ್ವ ತಂಡದಲ್ಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚನೆ ನೀಡಬಹುದು.
ಆಡಿಯೋದಲ್ಲಿ ತಮ್ಮ ಮೇಲೆ ಮಾಡಿರುವ ಆಪಾದನೆ ಕುರಿತು ನೊಂದುಕೊಂಡ ಸ್ಪೀಕರ್ ರಮೇಶ್ ಕುಮಾರ್ ಈ ಆರೋಪವನ್ನು ಯಾರು ಮಾಡಿದ್ದಾರೆ. ಯಾಕೆ ಮಾಡಿದ್ದಾರೆ. ಯಾವಾಗ ನನಗೆ ಹಣಕೊಟ್ಟರು ಎಂಬ ಸಮಗ್ರ ತನಿಖೆಗೆ ಆಗಬೇಕು. ಈ ಕುರಿತು ತನಿಖೆ ನಡೆದು 15 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅಂದರಂತೆ ಇಂದು ತಂಡ ರಚನೆಯಾಗಲಿದ್ದು, ನಾಳೆಯಿಂದಲೇ ಎಸ್ಐಟಿ ತನಿಖೆ ಶುರುಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಎಸ್ ಐಟಿ ತನಿಖೆಗೆ ಮಾರ್ಗದರ್ಶನ ನೀಡಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಮಆದರೆ ಇನ್ನೂ ಅಧಿಕೃತಗೊಂಡಿಲ್ಲ. ಬಿಜೆಪಿ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದಿರುವ ಹಿನ್ನಲೆ ಅರೆ ನ್ಯಾಯಾಂಗ ತನಿಖೆ ಸರ್ಕಾರ ಮುಂದಾಗಬಹುದು ಎನ್ನಲಾಗಿದೆ. ಅರೆ ನ್ಯಾಯಾಂಗ ತನಿಖೆ ಒಪ್ಪಿಸುವುದರ ಬಗ್ಗೆ ಕೂಡ ಸ್ಪೀಕರ್ ಜೊತೆ ಚರ್ಚೆ ನಡೆಸಲಾಗುವುದು. ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಈ ತನಿಖೆ ನಡೆಸಿದ ಬಳಿಕ ಅವರು ಸ್ಪೀಕರ್ಗೆ ವರದಿ ನೀಡಬೇಕಾಗುತ್ತದೆ