ವಾಷಿಂಗ್ಟನ್,ಫೆ.12- ಜಾಗತಿಕ ಹಸಿರು ಸಂರಕ್ಷಣೆಯಲ್ಲಿ ಭಾರತ ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಅಧ್ಯಯನವೊಂದು ತಿಳಿಸಿದೆ.
ಭಾರತ ಮತ್ತು ಚೀನಾದಲ್ಲಿ ಪರಿಸರ ಮಾಲಿನ್ಯ ತೀವ್ರ ಹೆಚ್ಚಾಗಿದ್ದು, ಇದರಿಂದ ವಿಶ್ವಕ್ಕೆ ಗಂಡಾಂತರ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಈ ವರದಿ ವ್ಯತಿರಿಕ್ತವಾಗಿದೆ.
ಕಳೆದ 20ವರ್ಷಗಳಲ್ಲಿ ವಿಶ್ವ ಇದ್ದದಕ್ಕಿಂತ ಈಗ ಹಸಿರು ಹೆಚ್ಚಾಗಿದೆ ಎಂಬ ಸಂಗತಿಯನ್ನೂ ಸಹ ನಾಸಾ ಅಧ್ಯಯನ ದೃಢಪಡಿಸಿದೆ.
ವಿಶ್ವದಲ್ಲಿರುವ ಒಟ್ಟು ಹಸಿರು ವಲಯದಲ್ಲಿ ಭಾರತ ಮತ್ತು ಚೀನಾ ಮೂರನೇ ಒಂದು ಭಾಗ ಹೊಂದಿದ್ದು, ಈ ಎರಡೂ ದೇಶಗಳಲ್ಲಿ ಹಸಿರು ಸಂವರ್ಧನೆ ಹೆಚ್ಚಾಗುತ್ತಿದೆ ಎಂದು ಈ ಅಧ್ಯಯನದ ಪ್ರಮುಖ ಲೇಖಕ ಬೋಸ್ಟಾನ್ ವಿಶ್ವ ವಿದ್ಯಾಲಯದ ಚೀ ಚೆನ್ ತಿಳಿಸಿದ್ದಾರೆ.