ಬೆಂಗಳೂರು, ಫೆ.12-ವ್ಯಾಲೆಂಟೈನ್ ಡೇ ಹತ್ತಿರ ಬಂದಿದೆ. ಚಾಕಲೇಟ್‍ಗಳು, ಹೂವುಗಳು ಮತ್ತು ಆಭರಣಗಳು ತಮ್ಮ ಪ್ರೀತಿಪಾತ್ರರಿಗೆ ಕೊಡುಗೆಯಾಗಿ ನೀಡಬಯಸುವವರಲ್ಲಿ ಅತ್ಯಂತ ಬೇಡಿಕೆ ಹೊಂದಿವೆ. ಈ ಬಾರಿಯ ವ್ಯಾಲೆಂಟೈನ್ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಸುಭದ್ರ ಭವಿಷ್ಯದ ಕೊಡುಗೆ ನೀಡಿ.
ಅಷ್ಟೇನೂ ಸಾಂಪ್ರದಾಯಕವಾದ ಆಯ್ಕೆ ಅಲ್ಲದ ಕೊಡುಗೆ ಜೀವವಿಮೆ, ಪ್ರೀತಿಯ ನಿಸ್ವಾರ್ಥ ಮತ್ತು ಚಿಂತನಾಪೂರ್ಣ ಸೂಚನೆಯಾಗಲಿದೆ.
ಅವಿವಾ ಐ-ಟರ್ಮ್ ಸ್ಮಾರ್ಟ್ ಇಂತಹ ಸಂರಕ್ಷಣಾ ಯೋಜನೆಯಾಗಿದ್ದು, ಇದು ಜೀವನದ ಅನಿಶ್ಚತೆಗಳಲ್ಲಿ ನಿಮ್ಮ ಕುಟುಂಬಕ್ಕೆ ಭದ್ರತೆ ಪೂರೈಸುತ್ತದೆ.
ಅವಿವಾ ಐ-ಟರ್ಮ್ ಸ್ಮಾರ್ಟ್ ಅತ್ಯಂತ ಕೈಗೆಟುಕುವ ವಿಮಾ ಯೋಜನೆಗಳಲ್ಲಿ ಒಂದಾಗಿದ್ದು, ವಿಮೆ ಮಾಡಿಸಲಾದ ವ್ಯಕ್ತಿಯ ದುರದೃಷ್ಟವಾಶಾತ್ ಸಾವಿನ ಸಂದರ್ಭದಲ್ಲಿ ನಾಮನಿರ್ದೇಶಿತರಿಗೆ ದೊಡ್ಡ ಮೊತ್ತವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಈ ಯೋಜನೆ ವಿಶೇಷ ಆಯ್ಕೆಯನ್ನು ಸಾದರಪಡಿಸುತ್ತಿದ್ದು, ಅವಿವಾ ಕ್ರಿಟಿಕಲ್ ಇಲ್‍ನೆಸ್ ಅಂಡ್ ಡಿಸೆಬಿಲಿಟಿ ರೈಡರ್-ನಾನ್ ಲಿಂಕ್ಡ್ ರೈಡರ್ ಈ ಆಯ್ಕೆಯಾಗಿದೆ.
ಈ ಹೆಚ್ಚುವರಿ ಆಯ್ಕೆಯಲ್ಲಿ ಗ್ರಾಹಕರು 16 ಗಂಭೀರ ಅಸ್ವಸ್ಥತೆಗಳು ಮತ್ತು ಖಾಯಂ ವೈಕಲ್ಯತೆಗಳು ಅಸ್ವಸ್ಥತೆಯಿಂದ ಅಥವ ಅಪಘಾತಗಳಿಂದ ಉಂಟಾಗುವುದರ ಮೇಲೆ ವಿಸ್ತತ ಸಂರಕ್ಷಣೆ ಪಡೆಯಬಹುದಾಗಿದೆ.
ಅವಿವಾ ಲೈಫ್ ಇನ್ಸುರೆನ್ಸ್‍ನ ಮುಖ್ಯ ಗ್ರಾಹಕ ಮಾರುಕಟ್ಟೆ ಮತ್ತು ಡಿಜಿಟಲ್ ಅಧಿಕಾರಿ ಅಂಜಲಿ ಮಲ್ಹೋತ್ರಾ ಅವರು ಮಾತನಾಡಿ, ನಿಮ್ಮ ಪ್ರೀತಿಪಾತ್ರರಿಗೆ ಜೀವನದ ಗುರಿಗಳಲ್ಲಿ ಭದ್ರತೆ ನೀಡುವುದಕ್ಕಿಂತಲೂ ಹೆಚ್ಚಿನ ತೃಪ್ತಿ ಮತ್ತೊಂದಿಲ್ಲ. ಅವಿವಾ ಐ-ಸ್ಮಾರ್ಟ್ ಅಂತಹ ಒಂದು ಸಂರಕ್ಷಣಾ ವೇದಿಕೆಯಾಗಿದ್ದು, ನಿಮ್ಮ ಪ್ರೀತಿಪಾತ್ರರ ಆರ್ಥಿಕ ಭವಿಷ್ಯವನ್ನು ಇದು ಸುಭದ್ರಗೊಳಿಸುವುದಲ್ಲದೆ, ಹೆಚ್ಚುವರಿ ಆಯ್ಕೆಯ ರೈಡರ್‍ಗಳೊಂದಿಗೆ ನಿಮ್ಮನ್ನು ರಕ್ಷಿಸುತ್ತದೆ ಎಂದರು.