ಆಡುಗೋಡಿಯಲ್ಲಿ ರಥಸಪ್ತಮಿ ಪ್ರಯುಕ್ತ ಮುತ್ತಿನ ಪಲ್ಲಕ್ಕಿ ಹಾಗೂ ದೇವರುಗಳ ಮೆರವಣಿಗೆ

ಬೆಂಗಳೂರು, ಫೆ.11-ನಗರದ ಆಡುಗೋಡಿಯಲ್ಲಿ ರಥಸಪ್ತಮಿ ಹಬ್ಬದ ಪ್ರಯುಕ್ತ ಮುತ್ತಿನ ಪಲ್ಲಕ್ಕಿ ಹಾಗೂ 37 ದೇವರುಗಳ ಮೆರವಣಿಗೆ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಆಡುಗೋಡಿ ಮುಖ್ಯರಸ್ತೆಯ ಮಾರ್ಗವಾಗಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನಾಳೆ ಸಂಜೆ 7 ಗಂಟೆಯಿಂದ 13ರ ಬೆಳಗ್ಗೆ 9 ಗಂಟೆಯವರೆಗೆ ರಸ್ತೆ ನಿರ್ಬಂಧಿಸಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಮಡಿವಾಳ ಮತ್ತು ಹೊಸೂರು ರಸ್ತೆಯ ಮಾರ್ಗವಾಗಿ ಹೊಸೂರು ಲಸ್ಕರ್ ರಸ್ತೆಯ (ಆಡುಗೋಡಿ ಮುಖ್ಯರಸ್ತೆ) ಕಡೆಗೆ ಬರುವ ಎಲ್ಲಾ ವಾಹನ ಸಂಚಾರವನ್ನು ಮಡಿವಾಳ ಚೆಕ್‍ಪೋಸ್ಟ್ ಜಂಕ್ಷನ್‍ನಲ್ಲಿ ನಿರ್ಬಂಧಿಸಲಾಗಿರುತ್ತದೆ.

ಡಾ.ಮರೀಗೌಡ ರಸ್ತೆಯ ಮಾರ್ಗವಾಗಿ ಬೆಂಗಳೂರು ಡೈರಿ ಜಂಕ್ಷನ್ ಮೂಲಕ ನೇರವಾಗಿ ಕೆ, ಹೆಚ್.ರಸ್ತೆ ಕಡೆಗೆ ಅಥವಾ ಬಲ ತಿರುವು ಪಡೆದು ಬನ್ನೇರುಘಟ್ಟ ರಸ್ತೆಯನ್ನು (ಆನೇಪಾಳ್ಯ ಕಡೆಗೆ) ಸೇರಬಹುದಾಗಿರುತ್ತದೆ.

ಕೋರಮಂಗಲ 80 ಅಡಿ ರಸ್ತೆಯ ಕಡೆಯಿಂದ ಹೊಸೂರು ಲಷ್ಕರ್ ರಸ್ತೆಯ ಆಡುಗೋಡಿ ಕಡೆಗೆ ಸಂಚರಿಸುವ ಸಂಚಾರವನ್ನು ಯುಕೋಬ್ಯಾಂಕ್ ಜಂಕ್ಷನ್‍ನಲ್ಲಿ ಬಲತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿರುತ್ತದೆ.

ವಾಹನ ಸವಾರರು ಮಡಿವಾಳ ಚೆಕ್‍ಪೋಸ್ಟ್ ಮೂಲಕ ಡಾ.ಮರೀಗೌಡ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ ಅಥವಾ ಕೋರಮಂಗಲ 80 ಅಡಿ ರಸ್ತೆಗೆ ಸೇರುವ ಯಡನೀರು ಮಠ ರಸ್ತೆಯಿಂದ ಬರುವ ವಾಹನಗಳು ಬಲತಿರುವು ಪಡೆದು 80 ಅಡಿ ಪೆರಿಪೆರಲ್ ರಸ್ತೆಯ ಮೂಲಕ ವಿವೇಕನಗರ ನೀಲಸಂದ್ರ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಅಶೋಕನಗರ, ನೀಲಸಂದ್ರ ಮತ್ತು ಹೊಸೂರು ಲಷ್ಕರ್ ರಸ್ತೆಯಲ್ಲಿ ಸಿ.ಎಂ.ಪಿ ಜಂಕ್ಷನ್ ಕಡೆಯಿಂದ ಆಡುಗೋಡಿ ಮುಖ್ಯರಸ್ತೆ ಕಡೆಗೆ ಸಂಚರಿಸುತ್ತಿದ್ದ ಸಂಚಾರವನ್ನು ಆನೇಪಾಳ್ಯ ಜಂಕ್ಷನ್‍ನಲ್ಲಿ ನಿರ್ಬಂಧಿಸಲಾಗಿದೆ.

ವಾಹನ ಸವಾರರು ಬನ್ನೇರುಘಟ್ಟರಸ್ತೆಯ ಮಾರ್ಗವಾಗಿ ಸಂಚರಿಸಿ ಬೆಂಗಳೂರು ಡೈರಿ ಜಂಕ್ಷನ್ ಮೂಲಕ ಡಾ.ಮರೀಗೌಡ ರಸ್ತೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಸಾರ್ವಜನಿಕರು,ವಾಹನಸವಾರರು,ಚಾಲಕರುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಮೂಲಕ ಆಡುಗೋಡಿ ರಥಸಪ್ತಮಿ ಮತ್ತು 37 ದೇವರುಗಳ ಮುತ್ತಿನ ಪಲ್ಲಕ್ಕಿಯಉತ್ಸವ, ಮೆರವಣಿಗೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅನುವುಮಾಡುವ ನಿಟ್ಟಿನಲ್ಲಿ ಈ ಬದಲಾವಣೆಗಳು ಮಾಡಿದ್ದು, ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ