ಎಂಎಂ.ಕಲಬುರಗಿ ಮತ್ತು ಗೌರಿ ಲಂಕೇಶ್ ಹತ್ರಯೆ ಪ್ರಕರಣ: ಸಿಐಡಿಯಿಂದ ಶೀಘ್ರವೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ

ಬೆಂಗಳೂರು, ಫೆ.11-ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೈದಿದ್ದಾರೆ ಎನ್ನಲಾದ 10 ಶಂಕಿತ ಆರೋಪಿಗಳ ವಿರುದ್ಧ ಶೀಘ್ರವೇ ನ್ಯಾಯಾಲಯಕ್ಕೆ ಆರೋಪಿ ಪಟ್ಟಿ ಸಲ್ಲಿಸಲಾಗುವುದುದೆಂದು ಸಿಐಡಿ ಮೂಲಗಳು ತಿಳಿಸಿವೆ.

ತನಿಖೆ ಕೊನೆಯ ಹಂತ ತಲುಪಿದೆ ಎಂದು ತಿಳಿಸಿದ ಮೂಲಗಳು ಶಂಕಿತ ಆರೋಪಿಗಳಾದ ಸುದನ್ವ, ರಾಜೇಶ್ ಬಂಗೇರ್, ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ರಾಮಚಂದ್ರ ಬದ್ದಿ, ಅಮಿತ್ ದಗ್ವೇಕರ್, ಭರತ್ ಕುರ್ಣೆ, ಸುಜೀತ್ ಹಾಗೂ ಶರದ್ ಅವರ ವಿರುದ್ಧ ಚಾರ್ಜಶೀಟ್ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎರಡೂ ಹತ್ಯೆಗೂ ಒಂದೇ ಪಿಸ್ತೂಲು ಬಳಸಲಾಗಿದೆ ಎಂದು ಅಂಶ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.

2015, ಆಗಷ್ಟ 30ರಂದು ಧಾರವಾಡದ ಕಲ್ಯಾಣನಗರ ಬಡಾವಣೆಯಲ್ಲಿ ಕಲಬುರಗಿ ಅವರ ಹತ್ಯೆಯಾಗಿದ್ದನ್ನು ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ