
ಹ್ಯಾಮಿಲ್ಟನ್ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ 4 ರನ್ಗಳ ವಿರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಕಿವೀಸ್ ನಾಡಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಕನಸು ಭಗ್ನಗೊಂಡಿತು.
ಸಾಲಿಡ್ ಓಪನಿಂಗ್ ಕೊಟ್ಟ ಸೀಫರ್ಟ್, ಮನ್ರೊ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡಕ್ಕೆ ಓಪನರ್ಸ್ಗಳಾದ ಟಿಮ್ ಸಿಫರ್ಟ್ ಮತ್ತು ಕಾಲಿನ್ ಮನ್ರೊ ಆeಛಿeಟಿಣ ಓಪನಿಂಗ್ ಕೊಟ್ರು. ಆರಂಭದಲ್ಲೆ ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್ ಮಾಡಿದ ಈ ಜೋಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಮೊದಲ ವಿಕೆಟ್ಗೆ 80 ರನ್ ಸೇರಿಸಿತು.
ನ್ಯೂಜಿಲೆಂಡ್ ನಿಗದಿತ ಓವರ್ನಲ್ಲಿ 212 ರನ್
ನಂತರ ಬಂದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 27, ಕಾಲಿನ್ ಡಿ ಗ್ರಾಂಡ್ ಹೋಮ್ 30 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು. ಕೊನೆಯಲ್ಲಿ ಬಂದ ಡೆರಿಲ್ ಮಿಶೆಲ್ 19 ಮತ್ತು ರಾಸ್ ಟೇಲರ್ 14ರನ್ ಗಳಿಸಿದ್ರು. ನ್ಯೂಜಿಲ್ಯಾಂಡ್ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 212ರನ್ ಗಳಿಸಿತು.
ಬೊಂಬಾಟ್ ಬ್ಯಾಟಿಂಗ್ ಮಾಡಿದ ರೋಹಿತ್, ವಿಜಯ್
213 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೂರನೇ ಕ್ರಮಾಂಕದಲ್ಲಿ ಬಂದ ವಿಜಯ್ ಕಿವೀಸ್ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು. ವಿಜಯ್ ಶಂಕರ್ ಔಟ್ ಆಗುತ್ತಿದ್ದಂತೆ ನಂತರ ಬಂದ ರಿಷಭ್ ಪಂತ್ , ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ , ರೋಹಿತ್ ಶರ್ಮಾ, ಧೊನಿ ಬೇಗನೆ ಪೆವಿಲಿಯನ್ ಸೇರಿದ್ರು.
ಟೀಂ ಇಂಡಿಯಾಗೆ 4 ರನ್ ಗಳ ವಿರೋಚಿತ ಸೋಲು
ಇದರ ಪರಿಣಾಮ ತಂಡ ಒತ್ತಡದಲ್ಲಿ ಸಿಲುಕಿತು ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ ಮತ್ತು ಕೃನಾಲ್ ಪಾಂಡ್ಯ ಬೌಂಡರಿ ಸಿಕ್ಸರ್ಗಳನ್ನ ಬಾರಿಸಿ ಪ್ರಯತ್ನಿಸಿದರಾದ್ರು ಪ್ರಯೋಜನವಾಗಲಿಲ್ಲ ಕೊನೆಯಲ್ಲಿ ಟೀಂ ಇಂಡಿಯಾ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ಗಳಿಸಿ ಸೋಲು ಕಂಡಿತು.
ಇದರೊಂದಿಗೆ ಕಿವೀಸ್ ನಾಡಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಕನಸು ಭಗ್ನಗೊಂಡಿತು.