ಬುಡಾಪೆಸ್ಟ್,ಫೆ.11- ಹಂಗೇರಿಯಲ್ಲಿ ಜನಸಂಖ್ಯಾ ಹೆಚ್ಚಳಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇಲ್ಲಿನ ಪ್ರಜೆ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಪಡೆದರೆ ಅಂಥವರು ತೆರಿಗೆ ಕಟ್ಟುವಂತಿಲ್ಲ.
ಹಂಗೇರಿಯ ಪ್ರಧಾನಿ ವಿಕ್ಟರ್ ಒರ್ಬನ್ ನಿನ್ನೆ ಮಾಡಿರುವ ಭಾಷಣದಲ್ಲಿ ಈ ವಿಷಯವನ್ನು ತಿಳಿಸಿದ್ದು, ಯಾವ ಮಹಿಳೆ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುತ್ತಾಳೋ ಆಕೆ ಜೀವನ ಪರ್ಯಂತ ತೆರಿಗೆ ಪಾವತಿ ಮಾಡುವಂತಿಲ್ಲ ಎಂದು ಘೋಷಿಸಿದ್ದಾರೆ.
ಜೀವನ ಪರ್ಯಂತ ಇಂಥವರಿಗೆ ತೆರಿಗೆ ರಿಯಾಯ್ತಿ ನೀಡಲಾಗುವುದು, ಜೊತೆಗೆ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ನೆರವು ಹಾಗೂ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ಯೋಜನೆ ಮಹಿಳೆಯರಿಗೆ ಪ್ರೋತ್ಸಹ ನೀಡಲಿದೆ. ಹಾಗೆ ದೇಶದ ಜನಸಂಖ್ಯೆ ಹೆಚ್ಚಾಗಲು ಇದು ನೆರವಾಗಲಿದೆ ಎಂದು ಪಿಎಂ ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ವಿದೇಶಿಗಳಿಗೆ ಆಶ್ರಯ ನೀಡುವ ವಿಚಾರವನ್ನು ಖಂಡಿಸಿದ ಒರ್ಬನ್,ವಲಸಿಗರಿಂದ ದೇಶದಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಾಗುತ್ತದೆ. ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.