ಬೆಂಗಳೂರು, ಫೆ.11-ಯಲಹಂಕ ತಾಲ್ಲೂಕು ಚಿಕ್ಕಜಾಲ ಗ್ರಾಮದ ಜಾಗಕ್ಕೆ ಬೇಲಿತಂತಿಯನ್ನು ನಿರ್ಮಿಸಿ ಕಾಂಪೌಂಡ್ ಹಾಕುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಫೆ.14 ರಂದು ಕೋಗಿಲು ವೃತ್ತದಿಂದ ಯಲಹಂಕ ಮಿನಿ ವಿಧಾನಸೌಧದವರೆಗೆ ಬೃಹತ್ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಬಿ.ಆರ್.ಮುನಿರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕ ತಾಲ್ಲೂಕು ಚಿಕ್ಕಜಾಲ ಗ್ರಾಮದ ಸರ್ವೆ ನಂ.144 ಹಾಗೂ ಹಳೆ ನಂ.76 ರಲ್ಲಿನ 1-00 ಎಕರೆ ಜಮೀನಿನ ಪೈಕಿ 0-33 ಗುಂಟೆಗೆ ಸಾಗುವಳಿ ಮಂಜೂರು ಮಾಡಿ ಉಳಿದ 0-07 ಜಮೀನಿನಲ್ಲಿ ಸುಮಾರು 80 ವರ್ಷಗಳಿಂದಲೂ ಅನುಭವದಲ್ಲಿರುವ 0-07 ಗುಂಟೆ ಜಾಗಕ್ಕೆ ಬೇಲಿತಂತಿಯನ್ನು ನಿರ್ಮಿಸಿ ಕಾಂಪೌಂಡನ್ನು ಹಾಕಲು ಪ್ರಯತ್ನ ಮಾಡುತ್ತಿರುವುದನ್ನು ವಿರೋಧಿಸಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಜಾಗದಲ್ಲಿ ಯಾವುದೇ ಭೂಸ್ವಾಧೀನ ಆಗದೆ ಇರುವ ಜಾಗವಾದ 0-07 ಗುಂಟೆ ಜಾಗವನ್ನು ಕೃಷ್ಣಪ್ಪರವರ ಪಹಣಿಯಲ್ಲಿ ಫೂಟ್ ಕರಾಬ್ ಎಂದು ನೋಂದಾಯಿಸಿ ಅವರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.