ಜನ್‍ಧನ್ ಯೋಜನೆಯಲ್ಲಿ 90 ಸಾವಿರ ಕೋಟಿ ರೂ. ಸಂಗ್ರಹ

ನವದೆಹಲಿ, ಫೆ.11- ದೇಶದ ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೆ ಬಂದ ಪ್ರಧಾನಮಂತ್ರಿ ಜನಧನ ಯೋಜನೆಗೆ ಈವರೆಗೆ 90 ಸಾವಿರ ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಕ್ರೋಢೀಕರಣ ವೃದ್ಧಿಯಾಗುತ್ತಲೇ ಇದೆ.

ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕು. ಅದರಲ್ಲಿ ಹಣವೂ ಇರಬೇಕು ಎಂಬ ಸದುದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನಮಂತ್ರಿಯವರ ಜನಧನ ಯೋಜನೆಯಡಿ ಹೊಸದಾಗಿ ಕೋಟಿ ಕೋಟಿ ಖಾತೆಗಳು ಜನರಿಂದ ತೆರೆಯಲಾಗುತ್ತಿದೆ.

ಇದೀಗ ಜನ್‍ಧನ್ ಖಾತೆಗಳಲ್ಲಿ ಸಂಗ್ರಹವಾಗಿರುವ ಠೇವಣಿ ಮೊತ್ತ 90 ಸಾವಿರ ಕೋಟಿಯ ಗಡಿ ದಾಟುವ ನಿರೀಕ್ಷೆ ಇದೆ.

ಸರ್ಕಾರ ಜನ್‍ಧನ್ ಖಾತೆ ತೆರಯುವವರಿಗೆ ಅಪಘಾತ ವಿಮೆಯನ್ನ ನೀಡುತ್ತೆ. ಈ ಮೊತ್ತವನ್ನ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದೇ ಕಾರಣಕ್ಕೆ ಜನ್‍ಧನ್ ಖಾತೆಗಳ ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಅದರಲ್ಲಿ ಇಡುತ್ತಿರುವ ಹಣದ ಮೊತ್ತವೂ ಹೆಚ್ಚುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಉನ್ನತ ಮೂಲಗಳಿಂದ ಲಭ್ಯವಾಗಿದೆ.

ಜನವರಿ 23ರವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜನ್‍ಧನ್ ಖಾತೆಯಲ್ಲಿ ಒಟ್ಟು 88,566.92 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಇನ್ನು, ಇಲ್ಲಿವರೆಗೂ ಜನ್‍ಧನ್ ಯೋಜನೆಯಡಿ ಒಟ್ಟು 34.14 ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಶೇ.53ರಷ್ಟು ಮಹಿಳೆಯರಿದ್ದಾರೆ ಹಾಗೂ ಶೇ.59ರಷ್ಟು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಜನ ಖಾತೆಗಳನ್ನು ತೆರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ