ನಿನ್ನೆ ಕೇನ್ ವಿಲಿಯಮ್ಸ್ ಪಡೆ ವಿರುದ್ಧ ರೋಹಿತ್ ಪಡೆ ಮಾಡಿದ ಐದು ಪ್ರಮುಖ ತಪ್ಪುಗಳೇ ತಂಡವನ್ನ ಸೋಲುವಂತೆ ಮಾಡಿತು. ಬನ್ನಿ ಹಾಗಾದ್ರೆ ಟೀಂ ಇಂಡಿಯಾ ಸೋಲಲು ಕಾರಣವಾಗಿದ್ದು ಏನು ಅನ್ನೋದನ್ನ ತೋರಿಸ್ತಿವಿ ನೋಡಿ.
ಮಿಸ್ಟೆಕ್ ನಂ. 1
ಕ್ಯಾಚ್ ಕೈಚೆಲ್ಲಿದ್ರು., ಫೀಲ್ಡಂಗ್ನಲ್ಲಿ ಯಡವಟ್ಟು
ಟೀಂ ಇಂಡಿಯಾ ನಿನ್ನೆ ಕಿವೀಸ್ ಎದುರು ಮುಗ್ಗರಿಸಿ ಬೀಳಲು ಕಾರಣವಾಗಿದ್ದು ಕಳಪೆ ಫೀಲ್ಡಿಂಗ್. ಮೊದಲ ಪಂದ್ಯದಲ್ಲಿ ಮಾಡಿದ ಯಡವಟ್ಟನ್ನೇ ಎರನೇ ಪಂದ್ಯದಲ್ಲೂ ಮಾಡಿದ ಮಿಸ್ಟೇಕ್ಗಳನ್ನೆ ಮತ್ತೆ ಮತ್ತೆ ಮಾಡಿ ಸರಣಿಯನ್ನೆ ಕೈಚೆಲ್ಲುವಂತೆ ಮಾಡಿತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ 13ನೇ ಓವರ್ನ ಮೊದಲ ಎಸೆತದಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಕಾಲಿನ್ ಮನ್ರೊ ನೀಡಿದ ಸುಲಭ ಕ್ಯಾಚ್ನ್ನ ಖಲೀಲ್ ಅಹ್ಮದ್ ಕೈಚೆಲ್ಲಿದ್ರು. ಒಂದು ವೇಳೆ ಈ ಕ್ಯಾಚ್ನ್ನ ಖಲೀಲ್ ಹಿಡಿದಿದ್ರೆ ಕಾಲಿನ್ ಮನ್ರೊ 60 ರನ್ ಗಳಿಗೆ ಆಲೌಟ್ ಆಗುತ್ತಿದ್ರು.
ನಂತರ ಇದೇ ಹಾರ್ದಿಕ್ ಪಾಂಡ್ಯ ಅವರ 18ನೇ ಓವರ್ನ ಮೊದಲ ಎಸೆತದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ರು. ಸ್ಟ್ರೈಕ್ನಲ್ಲಿದ್ದ ಕಾಲಿನ್ ಡಿ ಗ್ರಾಂಡ್ ಹೋಮ್ ಆಫ್ ಸ್ಟಂಪ್ ನತ್ತ ಚೆಂಡನ್ನ ಬಲವಾಗಿ ಬಾರಿಸಿದ್ರು. ರೋಹಿತ್ ಶರ್ಮಾ ಡೈವ್ ಹೊಡೆದರಾದ್ರು ಕ್ಯಾಚ್ ಹಿಡಿಯುವಲ್ಲಿ ವಿಫಲರಾದ್ರು. ಇದು ಕೀವೀಸ್ ರನ್ ವೇಗವನ್ನ ತಡೆಯಲು ವಿಫಲವಾಯಿತು.
ಮಿಸ್ಟೆಕ್ ನಂ.2
ದುಬಾರಿಯಾದ್ರು ತಂಡದ ಟೀಂ ಇಂಡಿಯಾ ಬೌಲರ್ಸ್
ಕಳೆದ ಪಂದ್ಯದಲ್ಲಿ ಸೂಪರ್ ಸ್ಪೆಲ್ ಮಾಡಿ ಮ್ಯಾಚ್ ವಿನ್ನರ್ಗಳಾಗಿ ಹೊರ ಹೊಮ್ಮಿದ್ದ ಟೀಂ ಇಂಡಿಯಾ ಬೌಲಸರ್ಸ್ಗಳು ನಿನ್ನೆ ಮತ್ತೊಮ್ಮೆ ದುಬಾರಿ ಬೌಲರ್ಸ್ ಗಳಾದ್ರು. ಕಿವೀಸ್ ಓಪನರ್ಸ್ ಗಳಾದ ಕಾಲಿನ್ ಮನ್ರೊ ಮತ್ತು ಸೀಫರ್ಸ್ ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್ನ್ನ ಉಡೀಸ್ ಮಾಡಿದ್ರು. ನಂತರ ಬಂದ ಮಿಡ್ಲ್ ಆರ್ಡರ್ ಬ್ಯಾಟ್ಸ್ ಮನ್ಗಳು ಕೂಡ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು ಮನೋಸೋ ಇಚ್ಛೆ ದಂಡಿಸಿದ್ರು.
ವೇಗಿ ಭುವನೇಶ್ವರ್ ಕುಮಾರ್ 37 ರನ್ ನೀಡಿ 1 ವಿಕೆಟ್ ಪಡೆದ್ರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 44 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಕೃನಾಲ್ ಪಾಂಡ್ಯ 54 ರನ್ ನೀಡಿ ತಂಡದ ಪರ ಅತಿ ಹೆಚ್ಚು ರನ್ ನೀಡಿದ್ರು. ಇನ್ನು ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದ್ರು.
ಮಿಸ್ಟೆಕ್ ನಂ.3
ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ಫೇಲ್
ಟೀಂ ಇಂಡಿಯಾ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ತಂಡ ಓಪನರ್ ಧವನ್ ಕಳೆದುಕೊಂಡ ಹೊರತಾಗಿಯೂ ಓಪನರ್ ರೋಹಿತ್ ಮತ್ತು ವಿಜಯ್ ಶಂಕರ್ ನೆರವಿನಿಂದ ಮ್ತತೆ ಕಮ್ ಬ್ಯಾಕ್ ಮಾಡಿತ್ತು. ನಂತರ ಬಂದ ರಿಷಭ್ ಪಂತ್, ಧೋನಿ, ಹಾರ್ದಿಕ್ ಪಾಂಡ್ಯ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಬೇಗನೆ ಪೆವಿಲಿಯನ್ ಸೇರಿದ್ರು. ಇದು ತಂಡದ ಸಂಪೂಣರ್ ಅದಃ ಪತನಕ್ಕೆ ಕಾರಣವಾಯಿತು. ಒಂದು ವೇಳೆ ಈ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬ ಬ್ಯಾಟ್ಸ್ಮನ್ ನಿಂತಿದ್ರು. ತಂಡದ ಫಲಿತಾಂಶವೇ ಬೇರೆಯೇಯಾಗುತ್ತಿತ್ತು.
ಮಿಸ್ಟೇಕ್ ನಂ. 4
ಆಲ್ರೌಂಡರ್ ವಿಜಯ್ಗೆ ಬೌಲಿಂಗ್ ಕೊಡದೇ ಇದ್ದಿದ್ದು
ಕ್ಯಾಪ್ಟನ್ ರೋಹಿತ್ ವಿಜಯ್ ಶಂಕರ್ ವಿಷಯದಲ್ಲಿ ಮತ್ತೋಮ್ಮೆ ತಪ್ಪುಗಳನ್ನ ಮಾಡಿದ್ದಾರೆ. ಈ ತಮಿಳುನಾಡು ಆಲ್ರೌಂಡರ್ನ್ನ ಆಲ್ರೌಂಡರ್ರನ್ನಾಗಿ ಬಳಸಿಕೊಳ್ಳದೇ ಇಡೀ ಸರಣಿಯಲ್ಲಿ ಕೇವಲ ಬ್ಯಾಟ್ಸ್ಮನ್ ನ್ನಾಗಿ ಬಳಸಿಕೊಂಡು ತಪ್ಪು ಮಾಡಿದ್ರು. ಕಿವೀಸ್ ವಿರುದ್ಧ ಏಕದಿನ ಸರಣಿಯಲ್ಲಿ ವಿಕೆಟ್ ಪಡೆಯದಿದ್ರು ರನ್ ಗಳನ್ನ ನಿಯಂತ್ರಿಸಿದ್ದ ವಿಜಯ್ ಶಂಕರ್ಗೆ ಕೆಲ ಓವರ್ಗಳನ್ನಾದ್ರು ಕೊಟ್ಟು ರನ್ ವೇಗಕ್ಕೆ ಕಡಿವಾಣ ಹಾಕಬಹುದಿತ್ತು.
ಮಿಸ್ಟೇಕ್ ನಂ. 5
ಕೃನಾಲ್ ಗೆ ಸ್ಟ್ರೈಕ್ ಬಿಟ್ಟು ಕೊಡಲ್ಲಿಲ್ಲ ದಿನೇಶ್ ಕಾರ್ತಿಕ್
ಪಂದ್ಯದ ಕೊನೆಯ ಓವರ್ವರೆಗೂ ಟೀಂ ಇಂಡಿಯಾ ಗೆಲ್ಲುವ ಅವಕಾಶವಿತ್ತು. ಪಂದ್ಯದ ಕೊನೆಯಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗೆಲ್ಲುವ ಭರವಸೆ ಮೂಡಿಸಿದ್ರು. ವೇಗಿ ಸೌಥಿ ಅವರ ಕೊನೆಯ ಓವರ್ನಲ್ಲಿ ಗೆಲ್ಲಲು 16 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಎರಡು ರನ್ ಗಳಿಸಿದ್ರು. ಎರಡನೇ ಎಸೆತವನ್ನ ಕಾರ್ತಿಕ್ ವೇಸ್ಟ್ ಮಾಡಿದ್ರು. ಮೂರನೇ ಎಸೆತದಲ್ಲಿ ಕಾರ್ತಿಕ್ ರನ್ ಓಡಲಿಲ್ಲ. ಕೃನಾಲ್ಗೆ ಸ್ಟ್ರೈಕ್ ಬಿಟ್ಟುಕೊಡಲಿಲ್ಲ. . ಕಾರ್ತಿಕ್ ನಾಲ್ಕನೆ ಎಸೆತದಲ್ಲಿ ಗಳಿಸಿದ್ದು ಕೇವಲ ಒಂದು ರನ್ . ಒಂದು ವೇಳೆ ಕೃನಾಲ್ಗೆ ಸ್ಟ್ರೈಕ್ ಬಿಟ್ಟುಕೊಟ್ಟಿದ್ರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು
ಒಟ್ಟಾರೇ ಈ ಐದು ಮಿಸ್ಟೇಗ್ಲೇ ಟೀಂ ಇಂಡಿಯವನ್ನ ಸೋಲುವಂತೆ ಮಾಡಿ ಐತಿಹಾಸಿಕ ಟಿ20 ಸರಣಿ ಗೆಲ್ಲುವ ಅವಾಕಶದಿಂದ ವಂಚಿತನಾಗಿ ಮಾಡಿತು.