ಸತ್ಯಕ್ಕೆ ಸೋಲಿಲ್ಲ: ರಾಬರ್ಟ್ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ರಾಬರ್ಟ್‌ ವಾದ್ರಾ ಅವರು ಸತತ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದು, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ವಾದ್ರಾ, ಪ್ರಕರಣಕ್ಕೆ ಸಂಬಮ್ಧಿಸಿದಂತೆ ದೇಶಾದ್ಯಂತ ಬೆಂಬಲ ನೀಡಿದ ನನ್ನ ಸ್ನೇಹಿತರು ಮತ್ತು ಪರಿಚಯಸ್ಥರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಚೆನ್ನಾಗಿದ್ದೇನೆ, ಎಲ್ಲವನ್ನು ಉತ್ತಮ ಮತ್ತು ಶಿಸ್ತು ಬದ್ಧವಾಗಿ ಎದುರಿಸಿದ್ದೇನೆ. ಈ ಮೂಲಕ ಹೇಳುತ್ತಿದ್ದೇನೆ ಸತ್ಯವು ಯಾವಾಗಲೂ ವಿಜಯಶಾಲಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ವಾರದಲ್ಲಿ ಇ.ಡಿ. ಯಿಂದ ಮೂರು ಭಾರಿ ಸಮನ್ಸ್‌ ಪಡೆದಿದ್ದ ಉದ್ಯಮಿ ವಾದ್ರಾ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಶನಿವಾರ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.

“Truth Will Always Prevail,” Says Robert Vadra In Facebook Post

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ