ಗುರುವಾಯೂರು: ನೂತನ ಮನೆ ಗೃಹ ಪ್ರವೇಶಕ್ಕಾಗಿ ಉದ್ಯೊಮಿಯೊಬ್ಬರು ಕರೆತಂದಿದ್ದ ಒಕ್ಕಣ್ಣಿನ ಸಲಗದ ದಾಳಿಗೆ ಇಬ್ಬರು ಮೃತಪಟ್ಟಿದ್ದು, 7 ಜನರು ಗಾಯಗೊಂಡಿರುವ ಘಟನೆ ಕೇರಳದ ಗುರುವಾಯೂರಿನಲ್ಲಿ ನಡೆದಿದೆ.
ಕೊಟ್ಟಪಾಡಿಯ ಚೆಂಬಲಕುಲಂಗರ ದೇವಸ್ಥಾನ ಕಾರ್ಯಕ್ರಮಕ್ಕಾಗಿ ತೆಚಿಕೊಟ್ಟು ರಾಮಚಂದ್ರನ್ ಎಂಬ ಆನೆಯನ್ನು ಕರೆಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಉದ್ಯಮಿ ಶೈಜು ಎಂಬುವವರು ಆನೆಯನ್ನು ತಮ್ಮ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಆನೆ ಮಾವುತನ ನಿಯಂತ್ರಣಕ್ಕೆ ಸಿಗದೆ ಓಡಿದ್ದರಿಂದ ಗೃಹ ಪ್ರವೇಶ ಸಮಾರಂಭಕ್ಕೆ ಬಂದಿದ್ದ ಇಬ್ಬರು ಅತಿಥಿಗಳು ಮೃತಪಟ್ಟಿದ್ದಾರೆ.
ಪಕ್ಕದ ನಿವೇಶನದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು ಈ ಶ್ಯಬ್ಧದಿಂದ ಗಾಬರಿಯಾದ ಆನೆ ಓಡಲಾರಂಭಿಸಿದೆ. ಈ ವೇಳೆ ಇಬ್ಬರು ಮೃತಪಟ್ಟಿದ್ದಾರೆ.
54 ವರ್ಷದ ತೆಚಿಕೊಟ್ಟು ರಾಮಚಂದ್ರನ್ ಆನೆ ಅತ್ಯಂತ ಅಪಾಯಕಾರಿ ಆನೆ ಎಂದೇ ಹೆಸರು ಗಳಿಸಿದೆ. ಇದಕ್ಕೂ ಮುನ್ನ ಈ ಆನೆಯ ದಾಳಿಗೆ ಸಿಲುಕಿ 11 ಜನರು ಮತ್ತು 3 ಆನೆಗಳು ಮೃತಪಟ್ಟಿವೆ.
2 killed as elephant brought for house warming runs amok