
ಬೆಂಗಳೂರು, ಫೆ.10- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ಅವಧಿ ಮಾ.10ರಂದು ಕೊನೆಗೊಳ್ಳಲಿದ್ದು, ಈ ಹುದ್ದೆಗೆ ಅರ್ಹ ಪ್ರಾಧ್ಯಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾರ್ಗಸೂಚಿಗಳು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮ 1992 ರನ್ವಯ ಕನಿಷ್ಟ ಪಕ್ಷ 10 ವರ್ಷಗಳ ಕಾಲ ಪ್ರಾಧ್ಯಾಪಕರ ಹುದ್ದೆಯಲ್ಲಿ ಅಥವಾ ತತ್ಸಮಾನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಬಹುದು.
ತ್ರಿ ಪ್ರತಿಯಲ್ಲಿ ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಇತ್ಯಾದಿ ವಿವರಗಳೊಂದಿಗೆ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ, ಸ್ವಯಂ ಘೋಷಣೆಯೊಂದಿಗೆ ಸಮುಚಿತ ಮಾರ್ಗದ ಮುಖೇನ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಪಿ.ಬಿ. ನಂ.5033, ರಾಜಭವನ, ಬೆಂಗಳೂರು- 560 001 ಈ ವಿಳಾಸಕ್ಕೆ ಫೆ.20ರ ಸಂಜೆ 5.30 ರೊಳಗೆ ತಲುಪುವಂತೆ ಕಳುಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.