ಯಡಿಯೂರಪ್ಪ ಮತ್ತು ಶರಣಗೌಡ ನಡುವೆ ನಡೆದ ಮಾತುಕತೆ: ಆಡಿಯೋ ವಿಸ್ತಾರ

ಬೆಂಗಳೂರು, ಫೆ.8- ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ, ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುತ್ತೇವೆ, 25 ಕೋಟಿ ಕೊಡುತ್ತೇವೆ, ನೀವು ಕೂಡಲೇ ಬಾಂಬೆಗೆ ಹೋಗಿ ಅಲ್ಲಿ ವಿಜಯೇಂದ್ರ ಇರುತ್ತಾರೆ. ಅವರನ್ನು ಭೇಟಿ ಮಾಡಿ. ನಾಲ್ಕೂವರೆ ವರ್ಷಗಳ ಕಾಲ ನೀವು ಮಂತ್ರಿಗಳಾಗಿರಬಹುದು ಎಂದು ಯಡಿಯೂರಪ್ಪ ಆಫರ್ ಕೊಟ್ಟರು ಎಂದು ಗುರುಮಿಟ್ಕಲ್ ಶಾಸಕ ನಾಗನಗೌಡ ಕುಂದಕೂರ್ ಪುತ್ರ ಶರಣಗೌಡ ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿಂದು ಯಡಿಯೂರಪ್ಪ ಅವರು ಶರಣಗೌಡ ಅವರೊಂದಿಗೆ ನಡೆಸಿರುವ ಪೋನ್ ಸಂಭಾಷಣೆ ಮಾಡಿದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ 11 ಗಂಟೆಗೆ ಯಡಿಯೂರಪ್ಪನವರು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ಕಾಲ್ ಬಂದಿತ್ತು. ಆಗ ನಾನು ಕಾಲ್ ಕಟ್ ಮಾಡಿದೆ.ಎರಡನೇ ಬಾರಿಗೆ ಇನ್ನೊಂದು ಕಾಲ್ ಬಂತು ಆಗ ನಾನು ರಿಸೀವ್ ಮಾಡಲಿಲ್ಲ.

ಮೂರನೇ ಬಾರಿ ಬೇರೆ ನಂಬರ್‍ನಿಂದ ಮತ್ತೊಂದು ಕಾಲ್ ಬಂತು. ಆಗ ನಾನು ರಿಸೀವ್ ಮಾಡಿ ಅದನ್ನು ಅಣ್ಣವ್ರರಿಗೆ (ಕುಮಾರಸ್ವಾಮಿ)ಕನೆಕ್ಟ್ ಮಾಡಿದೆ. ನನ್ನನ್ನು ಸರ್ಕಿಟ್ ಹೌಸ್‍ಗೆ ಬರಲು ಹೇಳಿದರು.ನಾನು ರಾತ್ರಿ 12 ಗಂಟೆ ಸುಮಾರಿಗೆ ಅಲ್ಲಿಗೆ ಹೋದಾಗ ಅಲ್ಲಿ ಮರ್ಮಗಲ್ ಎನ್ನುವ ಪತ್ರಕರ್ತರೊಬ್ಬರು, ಹಾಸನ ಶಾಸಕರಾದ ಪ್ರೀತಮ್‍ಗೌಡ, ಶಾಸಕ ಶಿವನಗೌಡ ಅವರು ಇದ್ದರು.

ಈಗಾಗಲೇ 12 ಜನ ಬಂದಿದ್ದಾರೆ.ಈಗ ಬಂದರಷ್ಟೇ ಮಂತ್ರಿ ಮಾಡಲು ಅವಕಾಶವಿದೆ ಎಂದು ಹೇಳಿದರು.ನಾನು ನಮ್ಮ ತಂದೆಯವರನ್ನು ಕೇಳಬೇಕು ಎಂದು ಹೇಳಿದೆ.ಸರ್, ಕಾನೂನಾತ್ಮಕವಾಗಿ ತೊಂದರೆಯಾಗುವುದಿಲ್ಲವೇ ಎಂದು ಕೇಳಿದಾಗ ಸ್ಪೀಕರ್ ಅವರನ್ನೇ 50 ಕೋಟಿ ಕೊಟ್ಟು ಖರೀದಿಸಿದ್ದೇವೆ. ಬೇರೆಲ್ಲವನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಧಾನಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ನನಗೆ ಯಾರನ್ನೂ ಟ್ರ್ಯಾಪ್ ಮಾಡುವ ಉದ್ದೇಶವಿರಲಿಲ್ಲ. ಸಾಲ ಮನ್ನ್ನಾದ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುತ್ತಾರೆ, ಅವರಿಗೆ ನಮ್ಮ ರಾಜ್ಯದ ಅಂಕಿ-ಅಂಶಗಳ ಬಗ್ಗೆ ಗೊತ್ತಿತ್ತೆ ? ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಆಡಳಿತಕ್ಕೆ ಧಕ್ಕೆ ತರಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾವು ಮೂರು ತಲೆಮಾರಿನಿಂದ ಜೆಡಿಎಸ್‍ನಲ್ಲಿ ಇದ್ದೇವೆ. ನಮ್ಮ ದೊಡ್ಡಪ್ಪನವರು ಶಾಸಕರಾಗಿದ್ದರು.ಈಗ ನಮ್ಮ ತಂದೆ ಶಾಸಕರಾಗಿದ್ದಾರೆ.ಈಗ ನನ್ನ ಮೂಲಕ ಬಿಜೆಪಿಯವರು ತಲೆ ಬೀಸುವ ಯತ್ನ ನಡೆಸಿದ್ದರು.ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ಶರಣಗೌಡ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ