ಸಂಚಾರಿ ಇಂಜನಿಯರ್ ಕೋಶದಲ್ಲಿ 119 ಕೋಟಿರೂ. ಹಗರಣ:ವರದಿ ಸಲ್ಲಿಸುವಂತೆ ಟಿವಿಸಿಸಿಗೆ ಸೂಚನೆ ನೀಡಿದ ಮೇಯರ್

ಬೆಂಗಳೂರು,ಫೆ.8- ಪಾಲಿಕೆಯ ಸಂಚಾರಿ ಇಂಜಿನಿಯರಿಂಗ್ ಕೋಶದಲ್ಲಿ ನಡೆದಿದೆ ಎನ್ನಲಾದ 119 ಕೋಟಿ ರೂ. ಹಗರಣದ ಬಗ್ಗೆ ತನಿಖೆ ನಡೆಸಿ 15 ದಿನದೊಳಗೆ ವರದಿ ಸಲ್ಲಿಸುವಂತೆ ಟಿವಿಸಿಸಿಗೆ ಮೇಯರ್ ಗಂಗಾಂಬಿಕೆ ಸೂಚನೆ ನೀಡಿದ್ದಾರೆ.

ಸಂಚಾರಿ ಇಂಜಿನಿಯರಿಂಗ್ ಕೋಶದಲ್ಲಿ 2016-17 ಹಾಗೂ 2017-18ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ 119 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಮೇಯರ್ ಗಂಗಾಂಬಿಕೆಯವರು ಯೋಜನಾ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದು ಅಗತ್ಯ ತನಿಖೆ ನಡೆಸುವಂತೆ ಆದೇಶಿಸಿದ್ದರು.

ಮೇಯರ್ ಆದೇಶದ ಮೇರೆಗೆ ವಿಶೇಷ ಆಯುಕ್ತರು ಟಿವಿಸಿಸಿಗೆ ತನಿಖೆ ನಡೆಸಿ 15 ದಿನದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ