ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಸಿಎಲ್ಪಿ ಸಭೆಗೆ ಪಕ್ಷದ ನಾಲ್ವರು ಸದಸ್ಯರು ಗೈರಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಭೆಗೆ ಗೈರು ಹಾಜರಾಗಿರುವ ಶಾಸಕರಾದ ಉಮೇಶ್ ಜಾಧವ್, ರಮೇಶ್ ಜಾರಕಿ ಹೊಳಿ, ಮಹೇಶ್ ಕಮಟಳ್ಳಿ, ಬಿ ನಾಗೇಂದ್ರ ತಮ್ಮ ಗೈರಿಗೆ ಕಾರಣಗಳನ್ನು ತಿಳಿಸಿ ಪತ್ರ ಕಳುಹಿಸಿದ್ದಾರೆ.
ನಿಯಮಗಳಂತೆ ವಿಪ್ ಉಲ್ಲಂಘನೆ ಪರಿಣಾಮ ಹದಿನೈದು ದಿನಗಳೊಳಗಾಗಿ ಅತೃಪ್ತರು ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ. ಆದರೆ, ಗೈರಾಗಿರುವ ಶಾಸಕರು ತಮ್ಮ ಮುಂದಿನ ನಿರ್ಧಾರ ತಿಳಿಸಲು ಹದಿನೈದು ದಿನಗಳ ಸಮಯ ಕೋರಿರುವುದು, ಅತೃಪ್ತರು ಕಾನೂನು ತಜ್ಞರ ನೆರವು ಪಡೆದಿರುವ ಕುರಿತು ಅನುಮಾನ ಮೂಡಿಸಿದೆ