ಬೆಂಗಳೂರು,ಫೆ.8- ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯ ವಿತರಕನ್ನು ಮಿಲ್ಸ್(ಪಿಲ್ಸ್ಟರಿ) ಕಂಪನಿ ಸೇವೆಯಿಂದ ರದ್ದು ಮಾಡಿರುವುದನ್ನು ವಿರೋಧಿಸಿ ನಾಳೆ ಟೌನ್ಹಾಲ್ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಯಂತ್ ಗಣಿಗ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಿಲ್ಸ್ ಕಂಪನಿಯು ಯಾವುದೇ ಮಾಹಿತಿ ನೀಡದೆ ಕೆಎಫ್ಡಿಡಬ್ಲ್ಯೂಎ ಸದಸ್ಯರಾದ 16 ವಿತರಕರನ್ನು ಸೇವೆಯಿಂದ ರದ್ದು ಮಾಡಿದೆ ಇದನ್ನು ಖಂಡಿಸಿ ನಾಳೆ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
16 ವಿತರಕರು ಪಿಲ್ಸ್ಬರಿ ಮಾರಾಟದಲ್ಲಿ 15ರಿಂದ 20 ಕೋಟಿ ಲಾಭ ತಂದುಕೊಟ್ಟಿದ್ದು ಹಲವಾರು ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದ ಏಜೆನ್ಸಿ ಮೇಲೆ ಅವಲಂಬಿತರಾಗಿದ್ದಾರೆ. ಏಕಾಏಕಿ ಅವರನ್ನು ಕೆಲಸದಿಂದ ರದ್ದು ಮಾಡಿದರೆ ಜೀವನೋಪಾಯಕ್ಕೂ ದಾರಿಯಿಲ್ಲದೆ ಬೀದಿಗೆ ಬೀಳುತ್ತಾರೆ ಎಂದು ಹೇಳಿದ್ದಾರೆ.
ಕೂಡಲೇ ಸದಸ್ಯ ವಿತರಕರನ್ನು ರದ್ದುಪಡಿಸಿರುವುದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.