ವಿವಾಹವಾಗಲು ನಿರಾಕರಿಸಿದ 45 ವರ್ಷದ ಮಹಿಳೆಯನ್ನು ಆಕೆ ಮಗಳೆದುರೇ ಇರಿದುಕೊಂದ ಯುವಕ

ನವದೆಹಲಿ: ತನಗಿಂತ 18 ವರ್ಷ ಹಿರಿಯಳಾದ ವಿವಾಹಿತ ಮಹಿಳೆ ವಿವಾಹಕ್ಕೆ ನಿರಾಕರಿಸಿದಳೆಂದು ಕೋಪಗೊಂಡು ವ್ಯಕ್ತಿಯೊಬ್ಬ ಆಕೆಯ ಮಗಳ ಎದುರೇ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ.

ಬಿಹಾರ ಮೂಲದ ಶ್ಯಾಂ ಯಾದವ್ ಮಹಿಳೆ ಹತ್ಯೆಗೈದ ವ್ಯಕ್ತಿ. 45 ವರ್ಷದ ಮಾಧುರಿ ಎಂಬ ಮಹಿಳೆಯನ್ನು ಶ್ಯಾಮ್ ಪ್ರೀತಿಸುತ್ತಿದ್ದ. ಶ್ಯಾಂ ಹಾಗೂ ಮಾಧುರಿ ಶೂ ಕಾರ್ಖಾನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮಾಧುರಿ ಮೇಲೆ ಪ್ರೇಮಾಂಕುರವಾಗಿದ್ದರಿಂದ ಶ್ಯಾಂ ಆಕೆಯೊಂದಿಗೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆಗಾಗಲೇ ವಿವಾಹವಾಗಿ, ಮಗಳನ್ನು ಹೊಂದಿದ್ದ ಮಾಧುರಿ, ಶ್ಯಾಂ ನನ್ನು ಮದುವೆಯಾಗಲು ನಿರಾಕರಿಸಿದ್ದಳು.

ಅಲ್ಲದೇ ಶ್ಯಾಂ ಕಿರುಕುಳಕ್ಕೆ ಬೇಸತ್ತು ಕಾರ್ಖಾನೆ ಕೆಲಸ ತೊರೆದು ಬೇರೆಡೆ ಕೆಲಸಕ್ಕೆ ಸೇರಿದ್ದಳು. ಆದಾಗ್ಯೂ ಮಾಧುರಿಯನ್ನು ಹಿಂಬಾಲಿಸುತ್ತಿದ್ದ ಶ್ಯಾಂ, ಮದುವೆಯಾಗುವಂತೆ ಪೀಡಿಸುತ್ತಲೇ ಇದ್ದ. ಅಂತಿಮವಾಗಿ ಮಾಧುರಿ ನಿರಾಕರಿಸಲು, ಆಕೆಯ ಮಗಳ ಮುಂದೆಯೇ ಮಾಧುರಿಯನ್ನು ಚಾಕುವಿನಿಂದ ಇರಿದಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಾಧುರಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲೇ ಮಾಧುರಿ ಸಾವನ್ನಪ್ಪಿದ್ದಳು.

ಪ್ರಕರಣ ದಾಖಲಿಸಿಕೊಂದಿರುವ ಪೊಲೀಸರು, ಆರೋಪಿ ಶ್ಯಾಂ ನನ್ನು ಬಂಧಿಸಿದ್ದಾರೆ.

45 Years woman killed for refusing marriage proposal in front of daughter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ