ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ವನಿತೆಯರ ತಂಡ 23 ರನ್ಗಳಿಂದ ಸೋಲು ಕಂಡಿದೆ.
ವೆಲ್ಲಿಂಗ್ಟನ್ ಅಂಗಳದಲ್ಲಿ ಟಾಸ್ ಗೆದ್ದು ಹರ್ಮನ್ ಪ್ರೀತ್ ಪಡೆ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕ ಆಘಾತ ಹೊರತಾಗಿಯೂ ಓಪನರ್ ಸೋಫಿ ಡಿವೈನ್ ಅರ್ಧ ಶತಕ ಬಾರಿಸಿ ಮಿಂಚಿದ್ರು. ನಂತರ ಬಂದ ನಾಯಕಿ ಸಾಥರ್ವೈಟ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 33 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.ಬ್ಯಾಟ್ಸ್ 7, ಗರ್ರೆ 15, ಮಾರ್ಟಿನ್ ಅಜೇಯ 27 ಮತ್ತು ಮಾಕೆ ಅಜೇಯ 10 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
160 ರನ್ಗಳ ಬೃಹತ್ ಸವಾಲನ್ನ ಬೆನ್ನತ್ತಿದ ಭಾರತ ವನಿತೆಯರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 58, ರೊಡ್ರಿಗಸ್ 39 ಮತ್ತು ನಾಯಕಿ ಹರ್ಮನ್(17) ಪ್ರೀತ್ ಕೌರ್ ಹೊರತುಪಡಿಸಿ ತಂಡದ ಎಲ್ಲ ಆಟಗಾರ್ತಿಯರು ಒಂದಂಕಿ ರನ್ ಬಾರಿಸಿ ಪೆವಿಲಿಯನ್ ಸೇರಿದ್ರು. ಕೊನೆಗೆ 19.1 ಓವರ್ಗಳಲ್ಲಿ ಭಾರತ 136ರನ್ಗಳಿಗೆ ಆಲೌಟ್ ಆಯಿತು.