ಬೆಂಗಳೂರು, ಫೆ.7- ಕರ್ನಾಟಕ ಚಂದನಕ್ಕೆ ಪ್ರಸಿದ್ಧ ಎಂದು ತಿಳಿದಿದ್ದೆ. ಆದರೆ, ಈ ರಾಜ್ಯ ಅತಿಥಿ ಸತ್ಕಾರಕ್ಕೂ ಹೆಸರಾಗಿದೆ ಎಂದು ತಮಿಳುನಾಡಿನ ಗೋಲ್ಡನ್ ಟೆಂಪಲ್ನ ಶ್ರೀ ಶಕ್ತಿಅಮ್ಮ ಸ್ವಾಮೀಜಿಯವರು ತಿಳಿಸಿದರು.
ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಲೋಕಾರ್ಪಣೆ ಕುಂಭಾಭಿಷೇಕ ಮತ್ತು ನೂತನವಾಗಿ ನಿರ್ಮಿಸಿರುವ ಬಿಜಿಎಸ್ ಆಲಯದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಮನುಷ್ಯ ಒಳ್ಳೆಯದನ್ನು ಸಾಧಿಸುವತ್ತ ಅಭಿಮುಖವಾದರೆ ದೈವದ ಕೃಪೆ ಎಂದಿಗೂ ಇರುತ್ತದೆ.ಮನುಷ್ಯ ಸನ್ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ.ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ದುಡಿದಾಗ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.
ಪೂಜ್ಯ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಏಳಿಗೆಯಲ್ಲಿ ಪ್ರತಿಯೊಬ್ಬರೂ ತೊಡಗಿಕೊಂಡಾಗ ಸಮಾಜದ ಅಭಿವೃದ್ಧಿ ಸುಲಭ ಸಾಧ್ಯವಾಗುತ್ತದೆ.ಅದು e್ಞÁನ ಕ್ಷೇತ್ರ ಅಥವಾ ವಿe್ಞÁನ ಕ್ಷೇತ್ರ ಇರಬಹುದು.ಪ್ರತಿಯೊಬ್ಬರೂ ತಮ್ಮ ಅನುಪಮ ಕೊಡುಗೆ ನೀಡಿದಾಗ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಭಗವಂತ ನೀಡಿರುವ ಮಾನವ ಜನ್ಮವನ್ನು ಸೇವೆ ಮಾಡುವ ಮೂಲಕ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.