
ಬೆಂಗಳೂರು, ಫೆ.7-ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆ ಬೆಳಗ್ಗೆ ಕರೆದಿದ್ದು, ಎಲ್ಲಾ ಶಾಸಕರಿಗೂ ವಿಪ್ ನೀಡಲಾಗಿದೆ.
ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಿದ್ದಾರೆ.
ಈ ಸಭೆಗೆ ಎಲ್ಲಾ ಶಾಸಕರು ತಪ್ಪದೇ ಹಾಜರಾಗುವಂತೆ ವಿಪ್ನಲ್ಲಿ ತಿಳಿಸಲಾಗಿದ್ದು, ಗೈರು ಹಾಜರಾದವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.