ಭಾರೀ ಉತ್ಸಾಹದಿಂದಲೇ ಕಣಕ್ಕಿಳಿದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೆ ಮುಗ್ಗರಿಸಿ ಬಿದಿದ್ದೆ. ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಮಾಡಿದ ಕೆಲವು ಯಡವಟ್ಟುಗಳಿಂದ ರೋಹಿತ್ ಪಡೆ ಮುಗ್ಗರಿಸಿ ಬಿತ್ತು.
ಸಾಲಿಡ್ ಓಪನಿಂಗ್ ಕೊಟ್ಟ ಸೀಫರ್ಟ್, ಮನ್ರೊ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ಗೆ ಓಪನರ್ಗಳಾದ ಟಿಮ್ ಸೀಫರ್ಟ್ ಮತ್ತು ಕಾಲಿನ್ ಮನ್ರೊ ಸಾಲಿಡ್ ಓಪನಿಂಗ್ ಕೊಟ್ರು. ಆರಂಭದಲ್ಲೆ ಟೀಂ ಇಂಡಿಯಾ ಬೌಲರ್ಗಳನ್ನ ಚೆಂಡಾಡಿದ ಈ ಜೋಡಿ ಮೊದಲ ವಿಕೆಟ್ಗೆ 86 ರನ್ ಸೇರಿಸಿದ್ರು . ಆದ್ರೆ 34 ರನ್ ಗಳಿಸಿದ್ದ ಕಾಲಿನ್ ಮನ್ರೊ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಆಲ್ರೌಂಡರ್ ವಿಜಯ್ ಶಂಖರ್ಗೆ ಕ್ಯಾಚ್ ಕೊಟ್ಟು ಹೊರ ನಡೆದ್ರು.
ಅರ್ಧ ಶತಕ ಬಾರಿಸಿ ಮಿಂಚಿದ ಟಿಮ್ ಸೀಫರ್ಟ್
ಬಿರುಸಿನ ಬ್ಯಾಟಿಂಗ್ ಮಾಡಿದ ಟಿಮ್ ಸೀಫರ್ಟ್ 30 ಎಸೆತದಲ್ಲಿ ಅರ್ಧ ಶತ ಬಾರಿಸಿ ಮಿಂಚಿದ್ರು. ಇದರೊಂದಿಗೆ ಚೊಚ್ಚಲ ಅರ್ಧ ಶತಕ ಬಾರಿಸಿದ ಗೌರವಕ್ಕೆ ಪಾತ್ರರಾದ್ರು.
ಒಂದನೇ ಕ್ರಮಾಂಕದಲ್ಲಿ ಬಂದ ಕೇನ್ ವಿಲಿಯಮ್ಸ್ ನ್ ಟಿಮ್ ಸೀಫರ್ಟ್ ಗೆ ಉತ್ತಮ ಸಾಥ್ ಕೊಟ್ರು. ಈ ಜೋಡಿ ಟೀಂ ಇಂಡಿಯಾ ಬೌಲರ್ಗಳನ್ನ ಬೆಂಡೆತ್ತಿ 2ನೇ ವಿಕೆಟ್ಗೆ 48 ರನ್ ಸೇರಿಸಿತು. 84 ರನ್ ಬಾರಿಸಿ ಶತಕದತ್ತ ಮುನ್ನಗುತ್ತಿದ್ದ ಟಿಮ್ ಸೀಫರ್ಟ್ ಖಲೀಲ್ ಅಹ್ಮದ್ ಎಸೆತದಲ್ಲಿ ಬೌಲ್ಡ್ ಆದ್ರು.
ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 219 ರನ್
ನಂತರ ಕೊನೆಯಲ್ಲಿ ಬಂದ ಡೆರಿಲ್ ಮಿಶೆಲ್ 23, ಗ್ರಾಂಡ್ ಹೋಮ್ 3, ಮಿಶೆಲ್ ಸ್ಯಾಂಟ್ನರ್ ಅಜೇಯ 7 ರನ್ ಗಳಿಸಿದ್ರು. ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು.
ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ
220 ರನ್ಗಳ ಬೃಹತ್ ಸಾವಲನ್ನ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಕ್ಯಾಪ್ಟನ್ ರೋಹಿತ್ ಶರ್ಮಾ ಫರ್ಗ್ಯಸನ್ ಎಸೆತದಲ್ಲಿ ಸೌಥಿಗೆ ಕ್ಯಾಚ್ ನೀಡಿ ಹೊರ ನಡೆದ್ರು. ಇದಾದ ನಂತರ ಮೂರನೇ ಸ್ಲಾಟ್ನಲ್ಲಿ ಅಚ್ಚರಿ ರೀತಿಯಲ್ಲಿ ಬಂದ ಆಲ್ರೌಂಡರ್ ಶಿಖರ್ ಧವನ್ ಜೊತೆಗೂಡಿ ತಂಡವನ್ನ ಕುಸಿಯುವ ಭೀತಿಯಿಂದ ಪಾರು ಮಾಡಿದ್ರು.
ಇನ್ನೇನು ಈ ಜೋಡಿ ಗಟ್ಟಿಯಾಗಿ ನಿಲ್ಲುತ್ತೆ ಅಂದುಕೊಳ್ಳುವಾಗಲೇ 29ರನ್ ಗಳಿಸಿದ್ದ ಧವನ್ ಫರ್ಗ್ಯುಸನ್ ಎಸೆತದಲ್ಲಿ ಬೌಲ್ಡ್ ಆದ್ರು. ನಾಲ್ಕನೆ ಕ್ರಮಾಂಕದಲ್ಲಿ ಬಂದ ಡೆಲ್ಲಿ ಡ್ಯಾಶರ್ ರಿಶಭ್ ಪಂತ್ ಸ್ಯಾಂಟ್ನರ್ ಒಂದಂಕಿ ರನ್ ಗಳಿಸಿ ಪೆವಿಲಿಯನ್ ಸೇರಿದ್ರು. 27 ರನ್ ಗಳಿಸಿದ್ದ ವಿಜಯ ಶಂಕರ್ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದ್ರೆ, ಐoತಿeಡಿ ಔಡಿಜeಡಿನಲ್ಲಿ ಬಂದ ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಒಂದಂಕಿ ರನ್ ಗಳಿಸಿ ತಂಡದ ಸೋಲನ್ನ ಖಚಿತ ಪಡಿಸಿದ್ರು.
ಟೀಂ ಇಂಡಿಯಾ 139 ರನ್ಗಳಿಗೆ ಆಲೌಟ್
ಕೊನೆಯಲ್ಲಿ 7ನೇ ವಿಕೆಟ್ಗೆ ಆಲ್ರೌಂಡರ್ ಕೃನಾಲ್ ಪಾಂಡ್ಯ ಮತ್ತು ಧೊನಿ 52ರನ್ಗಳ ಜೊತೆಯಾಟ ನೀಡಿದ್ರು . ಆದರೆ ತಂಡ ಅಷ್ಟರಲ್ಲಿ ಆಗಲೇ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಕೃನಾಲ್ ಪಾಂಡ್ಯ 20, ಭುವನೇಶ್ವರ್ ಕುಮಾರ್, ಚಹಲ್ ಮತ್ತು ಖಲೀಲ್ ಅಹ್ಮದ್ ತಲಾ 1 ರನ್ ಬಾರಿಸಿದ್ರು. ತಂಡದ ಪರ 39 ರನ್ ಗಳಿಸಿದ ಧೋನಿ ತಂಡದ ಪರ ಹೈಯೆಸ್ಟ್ ಸ್ಕೋರರ್ ಎನಿಸಿದ್ರು. ಕೊನೆಗೆ ಟೀಂ ಇಂಡಿಯಾ 19.2 ಓವರ್ಗಳಲ್ಲಿ 139 ರನ್ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದು ಶೈನ್ ಆದ್ರು.
ಒಟ್ಟಾರೆ ಮೊದಲ ಪಂದ್ಯದಲ್ಲೆ ಮುಗ್ಗರಿಸಿರುವ ರೋಹಿತ್ ಪಡೆ ಮಾಡಿದ ತಪ್ಪುಗಳಿಂದ ಪಾಠ ಕಲಿತು ಎರಡನೇ ಟಿ20 ಪಂದ್ಯಕ್ಕೇ ಗ್ರೇಟ್ ಕಮ್ಬ್ಯಾಕ್ ಮಾಡಬೇಕಿದೆ.