ಬೆಂಗಳೂರು, ಫೆ.7- ಪ್ರೇಯಸಿಯ ಕೋರಿಕೆ ಈಡೇರಿಸುವ ಸಲುವಾಗಿ ಬಜಾಜ್ ಪಲ್ಸರ್ ವಾಹನಗಳನ್ನೇ ಕಳ್ಳತನ ಮಾಡಿ ಪ್ರೇಯಸಿ ಜತೆ ಪ್ರವಾಸಿ ತಾಣಗಳಿಗೆ ಜಾಲಿರೈಡ್ ಹೋಗುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗz Àಕೋರಮಂಗಲ ಠಾಣೆ ಪೆÇಲೀಸರು ಬಂಧಿಸಿ 6.15 ಲಕ್ಷರೂ.ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೊಮ್ಮನಹಳ್ಳಿಯ ಹೊಸಪಾಳ್ಯ, 6ನೆ ಮುಖ್ಯರಸ್ತೆ, 7ನೆ ಕ್ರಾಸ್ ನಿವಾಸಿ ಕಾರ್ತಿಕ್ (26) ಬಂಧಿತ ಬೈಕ್ ಕಳ್ಳ.
ಆರೋಪಿಯ ಬಂಧನದಿಂದ ಎಚ್ಎಸ್ಆರ್ ಲೇಔಟ್ ಠಾಣೆಯಎರಡು ದ್ವಿಚಕ್ರ ವಾಹನ ಕಳವು ಪ್ರಕರಣ, ಬಂಡೆಪಾಳ್ಯ, ವಿವೇಕನಗರ ಹಾಗೂ ಮಡಿವಾಳ ಠಾಣೆಗಳ ತಲಾ ಒಂದೊಂದು ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಐದು ದ್ವಿಚಕ್ರ ವಾಹನಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿದ್ದು, ಒಟ್ಟು 10 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆಗ್ನೇಯ ವಿಭಾಗದ ಕೋರಮಂಗಲ ಠಾಣೆ ಸುತ್ತಮುತ್ತಲ ಸರಹದ್ದುಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದರಿಂದ ಕಳ್ಳರ ಪತ್ತೆಗಾಗಿ ಆಗ್ನೇಯ ವಿಭಾಗದ ಉಪ ಪೆÇಲೀಸ್ ಕಮಿಷನರ್ ಡಾ.ಬೋರಲಿಂಗಯ್ಯಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಈ ತಂಡತನಿಖೆ ನಡೆಸಿ ಕೊನೆಗೂ ಆರೋಪಿಯನ್ನುತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳವು ಮಾಡಿದ ದ್ವಿಚಕ್ರ ವಾಹನ ಮಾರಾಟ ಮಾಡಲುಆರೋಪಿ ಹೊಂಚು ಹಾಕುತ್ತಿದ್ದ ವೇಳೆ ಈ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.
ಈತನ ಪ್ರೇಯಸಿಗೆ ಬಜಾಜ್ ಪಲ್ಸರ್ ವಾಹನಗಳೆಂದರೆ ಅಚ್ಚುಮೆಚ್ಚಂತೆ.ಈತ ಈ ಹಿಂದೆಯೂ ವಾಹನಗಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ನಂತರವೂತನ್ನ ಹಳೆ ಚಾಳಿ ಮುಂದುವರಿಸಿ ಆರು ಬಜಾಜ್ ಪಲ್ಸರ್ ವಾಹನಗಳನ್ನು ಜಾಲಿರೈಡ್ ಸಲುವಾಗಿ ಕಳ್ಳತನ ಮಾಡಿದ್ದಾನೆ.
ಪ್ರೇಯಸಿಯ ಮೋಜು-ಮಸ್ತಿಯ ಖರ್ಚಿಗಾಗಿ ಕಳ್ಳತನ ಮಾಡಿದ್ದ ಬೈಕ್ಗಳ ಪೈಕಿ ನಾಲ್ಕು ವಾಹನಗಳನ್ನು ಮಾರಾಟ ಮಾಡಿಅದರಿಂದ ಬಂದ ಹಣದಿಂದ ಪಲ್ಸರ್ ವಾಹನದಲ್ಲಿ ಪ್ರೇಯಸಿ ಯೊಂದಿಗೆ ಹೊಸ ವರ್ಷಾಚರಣೆ ಸಲುವಾಗಿ ನಂದಿಬೆಟ್ಟ, ಹೊಗೇನಕಲ್ ಫಾಲ್ಸ್, ಕೊಡಗು, ಧರ್ಮಸ್ಥಳ ಹಾಗೂ ಇನ್ನಿತರ ತಾಣಗಳಿಗೆ ಜಾಲಿರೈಡ್ ಹೋಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಪ್ರಾರಂಭದಲ್ಲಿ ಆರೋಪಿಯುತನ್ನ ಪ್ರೇಯಸಿ ಕೋರಿಕೆಈಡೇರಿಸುವ ಸಲುವಾಗಿ ಪಲ್ಸರ್ ವಾಹನಗಳನ್ನು ಕಳವು ಮಾಡುತ್ತಿದ್ದು, ಕದ್ದ ವಾಹನಗಳನ್ನು ಮಾರಾಟ ಮಾಡಿದ್ದರಿಂದ ಹೆಚ್ಚು ಹೆಚ್ಚು ಹಣ ಕೈ ಸೇರುತ್ತಿದ್ದರಿಂದಇದೇ ಕಸುಬನ್ನು ಮುಂದುವರಿಸಿದ್ದರು.
ಹೀಗೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುವುದು, ಕದ್ದ ಬೈಕ್ಗಳಲ್ಲಿ ಪ್ರೇಯಸಿಯೊಂದಿಗೆ ಜಾಲಿರೈಡ್ ಹಾಗೂ ಲಾಂಗ್ಡ್ರೈವ್ ಹೋಗುತ್ತಿದ್ದನಲ್ಲದೆ ಬೈಕ್ ಮಾರಾಟ ಮಾಡಿದ್ದ ಹಣದಿಂದ ಶಾಪಿಂಗ್ ಮಾಲ್, ಹೊಟೇಲ್, ಪಬ್, ಬಾರ್, ಸಿನಿಮಾ ಮಂದಿರಗಳಿಗೆ ಸುತ್ತುವುದರ ಜತೆಗೆ ಧೂಮಪಾನ, ಮದ್ಯಪಾನ ಮಾಡುವುದು, ಅಲ್ಲದೆಜೈಲು ಸೇರಿದಾಗ ಹೊರಬರಲು ಜಾಮೀನಿಗಾಗಿ ವಕೀಲರಿಗೆ ಹಣಕೊಡುವ ಹವ್ಯಾಸ ಮಾಡಿಕೊಂಡಿದ್ದನು.
ಆರೋಪಿಗೆ ಈ ಮೊದಲೇ ಮದುವೆಯಾಗಿದ್ದು, ಪದೇ ಪದೇಈತಜೈಲು ಸೇರುತ್ತಿದ್ದರಿಂದ ಪತ್ನಿ ಈತನನ್ನು ತೊರೆದಿದ್ದರು.
ಮಡಿವಾಳ ಉಪವಿಭಾಗದ ಸಹಾಯಕ ಪೆÇಲೀಸ್ ಕಮಿಷನರ್ ಸೋಮೇಗೌಡಅವರ ನೇತೃತ್ವದಲ್ಲಿ ಕೋರಮಂಗಲ ಠಾಣೆಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ವಿಶೇಷ ತಂಡದ ಯಶಸ್ವಿ ಕಾರ್ಯವನ್ನು ನಗರ ಪೆÇಲೀಸ್ಆಯುಕ್ತರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.