ಬೆಂಗಳೂರು, ಫೆ.7- ರಂಗಪರಂಪರೆ ಟ್ರಸ್ಟ್ ವತಿಯಿಂದ ರಂಗ ಕಾರ್ಯಾಗಾರ, ಸ್ವಚ್ಛ ಭಾರತ ಅಭಿಯಾನ, ಉಪನ್ಯಾಸ- ವಿಚಾರ ಸಂಕಿರಣ, ರಾಜ್ಯಮಟ್ಟದ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.
ರಾಷ್ಟ್ರೀಯತೆಗಳನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟಿ ಎರಡು ವಾರಗಳ ಅವಧಿಯ ರಂಗ ಕಾರ್ಯಾಗಾರ, ಉಪನ್ಯಾಸ, ವಿಚಾರ ಸಂಕಿರಣಗಳನ್ನು ಸಿಎಂ ನ್ಯಾಷನಲ್ ಸಂಯುಕ್ತ ಪದವಿ ಕಾಲೇಜು ಹಾಗೂ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಹನುಮಾನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಚ್.ಪಿ.ಪವನ್‍ಕುಮಾರ್ ಉದ್ಘಾಟಿಸಲಿದ್ದಾರೆ. ಕಾಲೇಜಿಗೆ ಹೊಂದಿಕೊಂಡಿರುವ ಹಯಗ್ರೀವಧಾಮ ಸಾಂಸ್ಕøತಿಕ ಕೇಂದ್ರದಲ್ಲಿ ಫೆ.11 ರಿಂದ 17ರ ವರೆಗೆ ಹಾಸ್ಯ ನಾಟಕಗಳನ್ನು ಪ್ರದರ್ಶಿಸುವುದರೊಂದಿಗೆ ರಾಜ್ಯಮಟ್ಟದ ಹಾಸ್ಯಮಯ ನಾಟಕ ಪ್ರದರ್ಶನಗಳ ಉತ್ಸವವನ್ನು ಏಳು ದಿನಗಳ ಕಾಲ ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆ ಸಹಕಾರದಿಂದ ನಡೆಯಲಿದೆ.
ಪ್ರತಿದಿನ ತಜ್ಞರುಗಳಿಂದ ರಂಗಭೂಮಿಯ ಬಗ್ಗೆ ಉಪನ್ಯಾಸ, ವಿಚಾರ ಸಂಕಿರಣ, ರಂಗಗೀತೆ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಶಾಲೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ನೇತೃತ್ವವನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಎಚ್.ಪಿಳ್ಳಾಂಜನಪ್ಪ ವಹಿಸಲಿದ್ದು, ಕಾರ್ಯದರ್ಶಿಗಳಾದ ಎಚ್.ಪಿ.ಪವನ್‍ಕುಮಾರ್, ವಿದ್ಯಾಸಂಸ್ಥೆಯ ಆಡಳಿತ ವರ್ಗದವರು, ಶಿಕ್ಷಕರು, ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.