ಒಡಿಶಾ,ಫೆ.06-ಇಂದು ಕೇಂದ್ರ ಸಾರಿಗೆ ಮತ್ತು ಹೆದ್ಧಾರಿ ಸಚಿವ ನಿತಿನ್ ಗಡ್ಕರಿ ಒಡಿಶಾದಲ್ಲಿ ಮೂರು ಹೆದ್ಧಾರಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳ ಅಂದಾಜು ವೆಚ್ಚ 2300 ಕೋಟಿ ರೂ.ಗಳು.
ಈ ಯೋಜನೆಗಳಿಂದ ಖನಿಜ ಸಂಪದ್ಬರಿತ ಜಿಲ್ಲೆಗಳಾದ ಅಂಗುಲ್ ಮತ್ತು ದೆಂಕನಲ್ ಜಿಲ್ಲೆಗಳು ರಾಜ್ಯದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಲಿವೆ.
ಪಾರಾದೀಪ್ ಬಂದರಿಗೆ ಭೇಟಿ ನೀಡಲಿರುವ ಸಚಿವರು ಅಲ್ಲಿ 430 ಕೋಟಿ ರೂ. ಮೌಲ್ಯದ ಬಂದರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ 3000 ಕೋಟಿ ರೂಗಳ ಮೌಲ್ಯದ ಆರು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.
ಈ ಯೋಜನೆಗಳು ಉದ್ಯೋಗವಕಾಶಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಸ್ಥಳಿಯ ಜನರ ಆರ್ಥಿಕ ಪರಿಸ್ಥಿತಿ ಸುಧಾರಣಗೆ ಸಹಾಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಸಾರಿಗೆ ಸಚಿವರ ಜೊತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.